ಮಾಗಳ ಗ್ರಾಮದ ಶ್ರೀ ಸಾರಿ ದುರ್ಗಾಮಾತೆಯು ತನ್ನದೇ ಆದ ಬಹು ವಿಶಿಷ್ಟ ಶಕ್ತಿಯನ್ನು ಹೊಂದಿದ್ದು ಅಪಾರ ಭಕ್ತಾದಿಗಳ ಇಷ್ಟಾರ್ಥಸಿದ್ದಿ ದೈವವಾಗಿ ಹೊರಹೊಮ್ಮಿದ್ದಾಳೆ. ಈ ಮಹಾಮಾತೆ ಜಗದೀಶ್ವರಿಗೆ ಪ್ರತೀ ದಿನವೂ ಮಹಾ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆಯುತ್ತವೆ. ವಿಶೇಷವಾಗಿ ಪ್ರತೀ ಅಮವಾಸ್ಯೆಯಂದು ಶ್ರೀ ಆದಿಶಕ್ತಿ ಸ್ವರೂಪಳಾದ ಸಾರಿ ದುರ್ಗಾಮಾತೆಗೆ ವಿಶೇಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವಗಳು ಸಾಕಷ್ಟು ಭಕ್ತಾದಿಗಳ ಉದ್ಘೋಷದೊಂದಿಗೆ ವಿಜೃಂಬಣೆಯಾಗಿ ಜರುಗುತ್ತವೆ. ಪ್ರಾತಃ ಕಾಲದಲ್ಲಿ ಆರಂಭವಾದ ದೇವಿ ಜೂಜಾ ವಿದಿ ವಿದಾನಗಳು ಬೆಳಗಾಗುವುದರೊಳಗಾಗಿ ಮಹಾಮಾತೆಗೆ ಮಹಾ ಆರತಿಯಾಗುತ್ತದೆ.
ಬರುವ ಭಕ್ತಾದಿಗಳ ಮದ್ಯೆ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಉತ್ಸವದಲ್ಲಿ ಹರಕೆಹೊತ್ತ ಭಕ್ತಾದಿಗಲಳು ತಮ್ಮ ಧಾರ್ಮಿಕ ಇಚ್ಚಾನುಸಾರ ಸೇವೆಯನ್ನು ಸಲ್ಲಿಸುತ್ತಾರೆ. ನಂತರ ಮಹಾ ಪ್ರಸಾದ ವಿನಿಯೋಗ ದಿನಪೂರ್ತಿ ನಡೆಯುತ್ತದೆ. ಪ್ರತೀ ಅಮವಾಸ್ಯೆಗೂ ಬೇರೆ ಬೇರೆ ಭಕ್ತಾದಿಗಳು ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಾರೆ. ಅಂತಯೇ ಈ ನಿಜ ಆಷಾಡ ಮಾಸ ಅಮವಾಸ್ಯೆಯ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಗಳದ ಬಹು ಪ್ರಸಿದ್ದ ಕಿರಾಣಿ ವರ್ತಕರಾದ ಶ್ರೀ ಅಶೋಕ ಪೂಜಾರ ಇವರು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಲ್ಲಪ್ಪಜ್ಜನವರು ದೇವಿಯ ಬಗ್ಗೆ ಅಪಾರ ಭಕ್ತಿ, ಗೌರವವನ್ನು ಹೊಂದಿದ್ದು ದೇವಿ ದರ್ಶನಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ನಗು ಮುಖದಿಂದಲೇ ಬರಮಾಡಿಕೊಂಡು ಅವರ ಕಷ್ಟ- ಸುಖಗಳನ್ನು ವಿಚಾರಿಸಿ ಧಾರ್ಮಿಕ ಆಶೀರ್ವಚನ ನೀಡುತ್ತಾರೆ. ಶ್ರೀ ಆದಿಶಕ್ತಿ ರೂಪಿಣಿಯಾದ ದೇವಿಗೆ ಮಾಗಳ ಗ್ರಾಮವಷ್ಟೇ ಅಲ್ಲದೇ ಹತ್ತಿರದ ಗ್ರಾಮಗಳಾದ ಹೊಸಹಳ್ಳಿ, ಅಲ್ಲೀಪುರ, ಅಯ್ಯನಹಳ್ಳಿ, ಅಂಗೂರು, ಹೂವಿನ ಹಡಗಲಿ, ದಾವಣಗೆರೆ, ಹಾವೇರಿ ಮಲೆನಾಡುಗಳಿಂದಲೂ ಅಪಾರ ಭಕ್ತಾದಿಗಳಿದ್ದಾರೆ. ಪ್ರತೀ ವರ್ಷ ನಡೆಯುವ ತಾಯಿಯ ಜಾತ್ರಾ ಮತ್ತು ಮಹಾ ರಥೋತ್ಸವಕ್ಕೆ ಎಲ್ಲರೂ ತಪ್ಪದೇ ಬರುತ್ತಾರೆ. ಗ್ರಾಮದ ಗೌಡ ಮನೆತನದವರಾದ ದೇವಿಶೆಟ್ರು ಬಾಲಚಂದ್ರಪ್ಪ, ರೇಣುಕಪ್ಪ ನವರು ಅಲ್ಲದೇ ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದ ನಾಗರೆಡ್ಡಿ, ಪೂರ್ಣಚಂದ್ರರೆಡ್ಡಿ ಮತ್ತಿತರರು ದೇವಿ ಆರಾಧನೆಯಲ್ಲಿ ಮತ್ತು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮಲ್ಲಪ್ಪಜ್ಜನವರ ಸುಪುತ್ರನಾದ ಸುರೇಶರವರು ಕೂಡಾ ದೇವಸ್ಥಾನದ ಎಲ್ಲಾ ಆಡಳಿತ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ಶ್ರೀ ಮಲ್ಲಪಜ್ಜನವರು & ಹಾಲಸ್ವಾಮಿಯವರು


No comments:
Post a Comment