ಕೃಪೆ: http://poojavidhana.blogspot.in/2008/08/sri-mangala-gowri-vrata.html
ಶ್ರೀ ಮಂಗಳ ಗೌರಿ ವ್ರತವನ್ನು
ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ.
ಮದುವೆಯ ನಂತರ 5 ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ದಿನ ಮಂಗಳ ಸ್ನಾನ ಮಾಡಿ,
ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು,
ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು
ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು
ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3
ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ (triangle) ಮಡಿಸಿ ಹಿಂದೆ ಇಡಬೇಕು.ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು.
ಸಾಮನ್ಯವಾಗಿ ಉಪಯೋಗಿಸುವ
ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ತಂಬಿಟ್ಟಿನ ಆರತಿ ಬೇಕಾಗುತ್ತೆ.ಮೊದಲು
ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರಿ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ
ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ
ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ ಆರತಿ ಮಾಡಬೇಕು. ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ.ಈ
ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ) ಹಿಡಿಯಬೇಕು. ಇದನ್ನು
ಮಂಗಳಗೌರಿಗೆ ಹಚ್ಚಿ, ನೀವು ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ
ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಳ್ಳಿ.
ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಇದನ್ನು
ಬಾಗಿನದಲ್ಲಿ ಇಟ್ಟು ಕೊಡಿ.
ಪ್ರತಿ ವರ್ಷ ಕೊನೆಯ ವಾರದ
ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ
ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ
ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ ಬಾಗಿನ ಕೊಡಬೇಕು.
ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ
ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.
ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.
ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.
No comments:
Post a Comment