ಮಾಗಳ(ರಂಗಾಪುರ) ಗ್ರಾಮದ ಅಪರೂಪದ ಉಗ್ರ ನರಸಿಂಹ ಸ್ವಾಮಿ ದೇವರು:
ಈ ದೇವಸ್ಥಾನದ ಮುಂಭಾಗದಲ್ಲಿರುವ ಕಂಬ ಶಾಸನದ ಪ್ರಕಾರ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಆಗ್ರಹಾರವಾಗಿದ್ದ ಮಾಗಳದ 200 ಮಹಾಜನರು, ಉಗ್ರ ನರಸಿಂಹ ಸ್ವಾಮಿ ನಿತ್ಯ
ಪೂಜೆಗೆ ಪತ್ರೆ, ಹೂವು ಬೆಳೆಯಲು 200 ಎಕರೆ ಜಮೀನು ನೀಡಿದ್ದರು. ಪ್ರತಿ ವರ್ಷವೂ ಅದೇ
200 ಮಹಾಜನರ ಕುಟುಂಬದವರು ಬಂದು ಪೂಜೆ ಸಲ್ಲಿಸುವ ಪ್ರತೀತಿ ಇದೆ
ಮಾಗಳ : ಮಾಗಳ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಮಾಗಳ ಗ್ರಾಮದ ಹತ್ತಿರ ಶ್ರೀ ರಂಗಾಪುರ ನರಸಿಂಹಸ್ವಾಮಿ ಗುಡಿ ಚಾಲುಕ್ಯ ಅರಸ ತ್ರೈಲೋಕ್ಯ ಮಲ್ಲ ದೇವನ ಕಾಲದಲ್ಲಿ ಶ್ರೀ ನರಸಿಂಹದೇವರಿಗೆ ಮತ್ತು ಗಣಪತಿ ದೇವರಿಗೆ ಸೇವಾ ಕಾರ್ಯಕ್ಕಾಗಿ ಕೆಲ ಭೂಮಿಯನ್ನು ದತ್ತಿ ಕೊಟ್ಟರು. ಆಗ ಗ್ರಾಮದ ಹೆಸರು ಮಾಗಳ. ಇಲ್ಲಿನ ಸೂರ್ಯನಾರಾಯಣ ಸ್ವಾಮಿ ಗಡಿಯನ್ನು ತ್ರಿಕೂಟಾ ದೇವಾಲಯವೆಂದು, ಶಿವ, ವಿಷ್ಣು ಮತ್ತು ಸೂರ್ಯದೇವರಿಗಾಗಿ ಕಟ್ಟಿಸಿದರು. ಈ ದೇವಾಲಯ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡು ಸುಂದರವಾಗಿದೆ.
ಶ್ರೀ ವೇಣುಗೋಪಾಲ ಸ್ವಾಮಿ ಗುಡಿ ಶಾಸನ ಬ್ರಾಹ್ಮಣ ಸೇನಾಪತಿ ಮತ್ತು ಅರಸನ ಮಂತ್ರಿಯಾಗಿದ್ದ ಮಾಧವನ ಶೌರ್ಯ ಪರಾಕ್ರಮವನ್ನು ಹೊಗಳಿದೆ. ಈ ಗ್ರಾಮದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ತುಂಗಭದ್ರಾ ನದಿಯು ಹರಿದಿದೆ. ಈ ತೀರದ ಒಂದು ದಡದಲ್ಲಿ ಮಾವಿನತೋಪು ಬೆಳೆದಿದ್ದು ಇದನ್ನು ಮಾವಿನ ಮರದ ಕೊಳವೆಂದು ಕರೆಯುತ್ತಿದ್ದರು. ಶಾಸನದಲ್ಲಿ ಇದನ್ನು ‘ಮಾಂಗ’ ಎಂದು ಕರೆಯುತ್ತಿದ್ದು ನಂತರ ‘ಮಾಗಳ’ವಾಗಿ ಪರಿವರ್ತನೆಯಾಗಿದೆ.

ಉಗ್ರ ನರಸಿಂಹ ಸ್ವಾಮಿಯ ಸ್ವರೂಪ ಮತ್ತು ಹಿನ್ನಲೆ :
ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾವೂ ಒಂದು. ನರಸಿಂಹಾವತಾರವನ್ನು ವಿಷ್ಣುವಿನ ನಾಲ್ಕನೆಯ ಅವತಾರ ಎಂಬುದಾಗಿ ಹೇಳಲಾಗುತ್ತದೆ..
ಹಿರಣ್ಯ ಕಶಿಪು ತನ್ನ ಮಗನಿಗೆ ಅಂಟಿಕೊಂಡಿದ್ದ ನಾರಾಯಣನ ಹುಚ್ಚನ್ನು ಬಿಡಿಸಲು, ಆನೆಯ ಕಾಲಲ್ಲಿ ತುಳಿಸಿದ. ಬೆಟ್ಟದಿಂದ ಕೆಳಗೆಸೆದ. ಹೆತ್ತ ತಾಯಿ ಧರ್ಮಕಾಂತೆಯಿಂದ ವಿಷಪ್ರಾಶನವನ್ನೂ ಮಾಡಿಸಿದ. ಆದರೆ ಪ್ರಹ್ಲಾದ ಶ್ರೀಮನ್ನಾರಾಯಣ ಎಲ್ಲೆಲ್ಲೂ ಇರುವನೆಂದ.
ಕೋಪಗೊಂಡ ಹಿರಣ್ಯಕಶಿಪು, ಈ ಅರಮನೆಯ ಕಂಬದಲ್ಲಿ ಇರುವನೇ ನಿನ್ನ ನಾರಾಯಣ ಎಂದ. ದೃಢ ಭಕ್ತಿಯಲ್ಲಿ ಪ್ರಹ್ಲಾದನು ಶ್ರೀಮನ್ನಾರಾಯಣನ ಜಪಿಸಿದಾಗ, ಕಂಬದಿಂದೊಡೆದು ಹೊರಬಂದ ಉಗ್ರನರಸಿಂಹ..ತನ್ನ ಪರಮ ಭಕ್ತನಾದ ಪ್ರಹ್ಲಾದನಿಗೆ ದರ್ಶನ ನೀಡಿ ಹಿರಣ್ಯಕಶಿಪು ಪಡೆದ ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ ರಾತ್ರಿಯೂ ಅಲ್ಲದ (ಸೂರ್ಯಾಸ್ತವಾಗುವ) ಹೊತ್ತು ಮುಳುಗುವ ಹೊತ್ತಿನಲ್ಲಿ , ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಸ್ಥಳದಲ್ಲಿ ಅಂದರೆ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ, ಮನುಷ್ಯನಾಗಲೀ ಅಲ್ಲದ ರೂಪದಲ್ಲಿ ಅಂದರೆ ಅರ್ಧ ಸಿಂಹ ಹಾಗೂ ಅರ್ಧ ನರ ಒಟ್ಟಾರೆಯಾಗಿ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಂಡ.

No comments:
Post a Comment