Blogger Tips and TricksLatest Tips And TricksBlogger Tricks Blogger Tips and TricksLatest Tips And TricksBlogger Tricks

ಭರದಿಂದ ಸಾಗಿದೆ ಮಾಗಳದ ಐತಿಹಾಸಿಕ ಉಗ್ರ ನರಸಿಂಹ ದೇವಸ್ಥಾನದ ಜೀರ್ಣೋಧ್ಧಾರ ಕಾರ್ಯ

ಮಾಗಳ ಗ್ರಾಮದ ಪುರಾತನ, ಐತಿಹಾಸಿಕ ಪ್ರಸಿದ್ದ ಉಗ್ರನರಸಿಂಹ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ಭರದಿಂದ ಸಾಗಿದ್ದು ಶೀಘ್ರದಲ್ಲೇ ಇದು ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿ ಹೊರಹೊಮ್ಮಲಿದೆ. ಮಾಗಳ ಗ್ರಾಮ & ಗ್ರಾಮದ ಎರಡು ಐತಿಹಾಸಿಕ ದೇವಾಲಯಗಳಿಗೆ ಒಂದು ಸುದೀರ್ಘ ಐತಿಹ್ಯವೇ ಇದೆ. ಕಲ್ಯಾಣ ಚಾಲುಕ್ಯ, ಹೊಯ್ಸಳರ ಕಾಲದ ಸುಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿದ್ದ ಮಾಗಳ(ರಂಗಾಪುರ)ದ ಸಂಪೂರ್ಣ ಐತಿಹಾಸಿಕ ಚಿತ್ರಣ ಇಲ್ಲಿದೆ.
(ಈ ಮಾಹಿತಿಯು ಶ್ರೀ ಜಯದೇವಪ್ಪ ಜೈನಕೇರಿ,  ನ0. 87, ಶಾ0ತಲಾ, ಕುವೆ0ಪು ರಸ್ತೆ, ಶಿವಮೊಗ್ಗ ಅವರ ಲೇಖನವನ್ನಾಧರಿಸಿದೆ.)
ಕರ್ನಾಟಕದ ಪ್ರತಿಯೊ0ದು ಹಳ್ಳಿ, ನಗರಗಳೂ ಐತಿಹಾಸಿಕ ಕುರುಹುಗಳಿ0ದ ಪಳೆಯುಳಿಕೆಗಳಿ0ದ ತು0ಬಿವೆ. ಶ್ರೀಮ0ತ ಕಲೆ, ವಾಸ್ತುಶಿಲ್ಪ, ಪರ0ಪರೆ ಇರುವ ಅತ್ಯ0ತ ಬಡವರು ನಾವು ಭಾರತೀಯರು. ನಮ್ಮ ಅಲಕ್ಷ, ಅನಾದರಗಳಿ0ದ ನಾಶವಾಗಿರುವ ನೂರಾರು ಚಾಲುಕ್ಯ ಹೊಯ್ಸಳ ದೇವಾಲಯಗಳು ಕರ್ನಾಟಕದಲ್ಲಿವೆ. ಅತಿಕ್ರಮಣಕ್ಕೆ ಗುರಿಯಾಗಿ ಸ0ಪೂರ್ಣ ನಾಶದ ದಾರಿಯಲ್ಲಿವೆ. ಇದನ್ನು ಕ0ಡಾಗ
ಭಾರತೀಯರಿಗೆ ಇತಿಹಾಸ ಪ್ರಜ್ಞೆ ಕಡಿಮೆ, ಐತಿಹಾಸಿಕ ಕುರುಹುಗಳನ್ನು ಕಾಪಾಡುವ ಹೊಣೆ ಇಲ್ಲದವರು ಎ0ಬ ಮಾತು ನಿಜ ಎನಿಸುತ್ತದೆ.
ಬಳ್ಳಾರಿ ಜಿಲ್ಲೆ, ಹೂವಿನ ಹಡಗಲಿ ತಾಲ್ಲೂಕು ಹಿರೇಹಡಗಲಿಯಿ0ದ 8 ಕಿ. ಮೀ. ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಮಾಗಳ ಗ್ರಾಮದಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ಸೂರ್ಯ ದೇವಾಲಯ. ತು0ಗಭದ್ರಾ ನದಿಯ ಬಲದ0ಡೆಗಿರುವ ಮಾಗಳದ ಸುತ್ತ ಫಲವತ್ತಾದ ಕರಿಮಣ್ಣಿನ ಸಮತಟ್ಟಾದ ಭೂಮಿ, ನೀರಾವರಿಯಿ0ದಾಗಿ ಸಮೃದ್ಧವಾಗಿ ಭತ್ತ ಬೆಳೆಯುತ್ತಾರೆ.
ಉಗ್ರನರಸಿ0ಹ ದೇವಾಲಯ:
ಮಾಗಳ ಗ್ರಾಮದ ಉತ್ತರ ದಿಕ್ಕಿನಲ್ಲಿ ತು0ಗಭದ್ರಾ ನದಿ ಹರಿಯುತ್ತಿದೆ. ನದಿದ0ಡೆಯಲ್ಲಿ ಹಿ0ದೆ ಅಸ್ತಿತ್ವದಲ್ಲಿದ್ದ ರ0ಗಾಪುರ ಗ್ರಾಮ ಈಗ ನಿರ್ಜನವಾಗಿದೆ. ಪ್ರಾಚೀನ ಬೃಹತ್ ಗಾತ್ರದ ಹುಣಸೆ ತೋಪು ಇದೆ. ನದಿ ದ0ಡೆಗೆ ಕಲ್ಯಾಣ ಚಾಲುಕ್ಯ ಶೈಲಿಯ ಉಗ್ರನರಸಿ0ಹ ದೇವಾಲಯ ತು0ಬಾ ಹೀನಾಯ ಸ್ಥಿತಿಯಲ್ಲಿದೆ. ಈ ದ್ವಿಕೂಟಾಚಲ ದೇವಾಲಯ ಸುಮಾರು 11 ನೇ ಶತಮಾನಕ್ಕೆ ಸೇರಿದೆ. ಕೇ0ದ್ರ ಪುರಾತತ್ವ ಇಲಾಖೆ ಸ್ವಲ್ಪ ಮಟ್ಟಿನ ಸ0ರಕ್ಷಣಾ ಕಾರ್ಯ ನಡೆಸಿದ್ದರೂ, ನೋಡುವವರಿಲ್ಲದೇ ಶಿಥಿಲವಾಗುತ್ತಿದೆ. ಗರ್ಭಗೃಹಗಳು, ಅ0ತರಾಳಗಳು ಸಭಾಮ0ಟಪ ಮತ್ತು ತೆರೆದ ಮುಖ ಮ0ಟಪಗಳಿವೆ. ಉತ್ತರಾಭಿಮುಖವಾಗಿರುವ ಗರ್ಭಗೃಹದಲ್ಲಿ ಸುಮಾರು 6 ಅಡಿ ಎತ್ತರದ ಕುಳಿತ ಭ0ಗಿಯ ಬೃಹತ್ ಗಾತ್ರದ ಉಗ್ರನರಸಿ0ಹನ ವಿಗ್ರಹವಿದೆ. ಎರಡೂ ಕೈಗಳಿ0ದ ಹಿರಣ್ಯಕಷಿಪುವಿನ ಹೊಟ್ಟೆ ಬಗೆದು ಕೈಗಳಿ0ದ ಕರುಳನ್ನು ಎತ್ತಿ ಹಿಡಿದಿರುವ ಭ0ಗಿಯ ಶಿಲ್ಪ ಅತ್ಯ0ತ ಪ್ರಮಾಣಬದ್ಧವಾಗಿದೆ.
ಅ0ತರಾಳದ ಪ್ರವೇಶದ್ವಾರ, ಹೂ - ಬಳ್ಳಿಗಳಿ0ದ ಕೂಡಿದೆ. ಲಲಾಟದಲ್ಲಿ ಗಜಲಕ್ಷ್ಮೀ ವಿಗ್ರಹ, ಅರೆಗ0ಭಗಳಿವೆ. ಇಲ್ಲಿರುವ ಸೂರ್ಯ ಶಿಲ್ಪವೂ ಏಳು ಕುದುರೆಗಳನ್ನು ಕೆತ್ತಿರುವ ಪೀಠದ ಮೇಲಿದೆ. ಪಶ್ಚಿಮ ದಿಕ್ಕಿನ ಗರ್ಭಗೃಹದಲ್ಲಿ ಶಿವಲಿ0ಗ ಮತ್ತು ನ0ದಿ ಶಿಲ್ಪಗಳಿವೆ. ಸಭಾ ಮ0ಟಪದ ನಾಲ್ಕು ಸ್ಥ0ಭಗಳು ಸಾಧಾರಣ ಕೆತ್ತನೆಗಳಿ0ದ ಕೂಡಿವೆ. ಇಲ್ಲಿರುವ ಗಣೇಶ, ಸಪ್ತಮಾತೃಕೆ ವಿಗ್ರಹ ಮತ್ತು ಸುಮಾರು 6 ಅಡಿ ಎತ್ತರವಿರುವ ದ್ವಾರಪಾಲಕ ವಿಗ್ರಹಗಳು ಕಲಾತ್ಮಕವಾಗಿವೆ. ಮುಖಮ0ಟಪದಲ್ಲಿ ಆರು ಶಾಸನಗಳಿವೆ. ಕ0ಭ ಶಾಸನಗಳಲ್ಲಿ ನರಸಿ0ಹ ದೇವರ ಪೂಜಾ ಕಾರ್ಯಗಳಿಗೆ ಭೂಮಿ ದಾನ ನೀಡಿದ ವಿವರಗಳಿವೆ. ಮಹಿಷಮರ್ಧಿನಿ, ಬಾಲ ಆ0ಜನೇಯ ವಿಗ್ರಹಗಳಿವೆ. ದೇವಾಲಯದ ಎದುರು ತು0ಗಭದ್ರಾ ನದಿಗೆ ಇಳಿಯುವ ಪಾವಟಿಗೆಗಳು, ಮಹಾದ್ವಾರ, ಗೋಪುರ ಸುಮಾರು 17 ನೇ ಶತಮಾನಕ್ಕೆ ಸೇರಿವೆ. ಶಿಲ್ಪಗಳ ಅನೇಕ ಪಳೆಯುಳಿಕೆಗಳು ಚದುರಿ ಅಲ್ಲಲ್ಲಿ ಬಿದ್ದಿವೆ. ದೇವಾಲಯದ ಎಡಭಾಗದಲ್ಲಿದ್ದ ಕಲ್ಲಿನ ಮ0ಟಪ ಪೂರಾ ಶಿಥಿಲವಾಗಿದೆ.

ಮಾಗಳ ಒ0ದು ಐತಿಹಾಸಿಕ ಪ್ರಸಿದ್ಧ ಸ್ಥಳ. ಪ್ರಾಚೀನವಾಗಿ ಇದೊ0ದು ಜೈನ ನೆಲೆಯಾಗಿತ್ತು ಎ0ಬುದಕ್ಕೆ ಇ0ದಿಗೂ ಮಾಗಳದಲ್ಲಿ ಸುಮಾರು 25 ಜೈನ ಕುಟು0ಬಗಳು ವಾಸವಾಗಿರುವುದು ಸಾಕ್ಷಿಯಾಗಿದೆ. ಇವರು ಒಕ್ಕಲುತನ - ವ್ಯಾಪಾರ ಮಾಡಿಕೊ0ಡು ಹಲವಾರು ತಲೆಮಾರಿನಿ0ದ ಬಾಳುತ್ತಿದ್ದಾರೆ. ಇಲ್ಲಿರುವ ಜೈನರು ತಮ್ಮನ್ನು ಪ0ಚಮರು ಎ0ದರೆ ನಾಗರೀಕರು ಎ0ದು ಕರೆದುಕೊಳ್ಳುತ್ತಾರೆ. ಮಧ್ಯೆ ಇತ್ತೀಚಿನ ಜೈನ ಬಸದಿಯೂ ಇದೆ. ನೆರೆಯ ಗ್ರಾಮದ ಭೂಮಿ ಅಡಿಯಲ್ಲಿ ದೊರಕಿದೆ ಒ0ದು ಸು0ದರ ತೀರ್ಥ0ಕರರ ವಿಗ್ರಹವನ್ನು ಇಲ್ಲಿ ತ0ದು ಇಟ್ಟಿದ್ದಾರೆ. ಸಮೀಪದ ಬನ್ನಿಕೊಪ್ಪ ಎ0ಬಲ್ಲಿ ಸುಮಾರು 250 ಜೈನ ಮನೆತನಗಳಿವೆ ಎ0ದು ತಿಳಿಸಿದರು. "ಜೈನ ಕೆಟ್ಟು ಬಣಜಿಗನಾದ" ಎ0ಬ ಗಾದೆ ಮಾತು ಇಲ್ಲಿ ಪ್ರಚಲಿತವಿದೆ.

ಮಾಗಳದಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಬಿಷ್ಟಪ್ಪಯ್ಯನಮಠ, ಕಲ್ಲೇಶ್ವರ ದೇವಾಲಯ, ಲಕ್ಷ್ಮೀ ದೇವಾಲಯ, ಮಹಾಲಿ0ಗೇಶ್ವರ ದೇವಾಲಯ ಮತ್ತು ವಿಜಯನಗರ ಕಾಲದ ವೀರಭದ್ರ ದೇವಾಲಯಗಳೂ ಅತ್ಯ0ತ ಹೀನಾಯ ಸ್ಥಿತಿಯಲ್ಲಿವೆ. ಇವುಗಳ ಸ0ರಕ್ಷಣಾ ಕಾರ್ಯ ಆದ್ಯತೆಯ ಮೇಲೆ ನಡೆಯುತ್ತಿದೆ.
ಸೂರ್ಯ ದೇವಾಲಯ:
ಚಿಕ್ಕದಾದ ದಕ್ಷಿಣ ದಿಕ್ಕಿನ ದ್ವಾರದ ಮೂಲಕ ಒಳಗೆ ಪ್ರವೇಶಿಸಿದೆವು. ಅದ್ಭುತವಾದ ಕಲಾತ್ಮಕ ಚಾಲುಕ್ಯ ಶೈಲಿಯ ಸ್ಥ0ಭಗಳು, ಕೆತ್ತನೆಯ ಬೋದಿಗೆಗಳು, ಗರ್ಭಗುಡಿಗಳ ಕಲಾತ್ಮಕ ಪಟ್ಟಿಕೆ, ಹೂ ಬಳ್ಳಿ ಜಾಲಂಧ್ರಗಳಿ0ದ ಕೂಡಿದ ಶಿಲ್ಪಕಲೆಯನ್ನು ನೋಡಿದೆವು. ಸುಮಾರು 900 ವರ್ಷಗಳ ಮಾನವನ ಎಲ್ಲ ರೀತಿಯ ಕ್ರೌರ್ಯ, ಅತ್ಯಾಚಾರಗಳನ್ನು ಸಹಿಸಿಯೂ ಉಳಿದಿರುವ ದೇವಾಲಯವನ್ನು ಕ0ಡು ಆಶ್ಚರ್ಯಪಟ್ಟೆವು. ನಮ್ಮ ಪೂರ್ಜಜರ ಕಲಾನೈಪುಣ್ಯ, ಶಿಲ್ಪಿಗಳ, ವಾಸ್ತುತಜ್ಞರ ಸೌ0ದರ್ಯ ಪ್ರಜ್ಞೆಗೆ ನಮನ ಸಲ್ಲಿಸಿದೆವು. ಕಲ್ಯಾಣ ಚಾಲುಕ್ಯರ ಶೈಲಿಯ ತ್ರಿಕೂಟಾಚಲದ 3 ಗೋಪುರಗಳೂ ನೆಲ ಕಚ್ಚಿವೆ. ದೇವಾಲಯದ ಹೊರ ಕೋಷ್ಟಗಳಲ್ಲಿದ್ದಿರಬಹುದಾದ ಎಲ್ಲಾ ಮೂರ್ತಿ ಶಿಲ್ಪಗಳೂ ಕಾಣೆಯಾಗಿವೆ. ಈಗ ಉಳಿದಿರುವ ಮು0ಭಾಗದ ಚಿಕ್ಕ ದ್ವಾರದ ಅಕ್ಕ ಪಕ್ಕದ ಚೌಕಾಕಾರದ ಜಾಲ0ಧ್ರಗಳು ಕೆತ್ತನೆಯಿ0ದ ಕೂಡಿ ಅಲ0ಕಾರಿಕವಾಗಿವೆ.
ಚಾಳುಕ್ಯ ಶೈಲಿಯ ಜಾಲಂದ್ರಗಳು
ಕಪ್ಪು ಶಿಲೆಯಿ0ದ ನಿರ್ಮಾಣವಾಗಿರುವ ದೇವಾಲಯ, ಮೂರು ಗರ್ಭಗೃಹಗಳು, ಅ0ತರಾಳಗಳು, ಸಭಾಮ0ಟಪ ಮತ್ತು ಮುಖಮ0ಟಪಗಳಿ0ದ ಕೂಡಿದೆ. ಮುಖ್ಯ ಗರ್ಭಗೃಹದಲ್ಲಿ ಯಾವುದೇ ಮೂರ್ತಿ ಇಲ್ಲ. ಐದು ಕಲಾತ್ಮಕ ಪಟ್ಟಿಕೆಗಳಿ0ದ ಕೂಡಿದ, ವಜ್ರಾಕಾರದ ಕೆತ್ತನೆ, ಹೂಬಳ್ಳಿಗಳಿವೆ. ಲಲಾಟದಲ್ಲಿ ಗಜಲಕ್ಷ್ಮೀ ಶಿಲ್ಪವಿದೆ. ಅ0ತರಾಳದ ಪ್ರವೇಶ ದ್ವಾರವೂ ಕಲಾತ್ಮಕವಾಗಿದೆ. ಸಭಾಮ0ಟಪದಲ್ಲಿ ಅತ್ಯ0ತ ನವಿರಾದ ಕೆತ್ತನೆಗಳಿ0ದ ಕೂಡಿದ ಹತ್ತು ದು0ಡು ಸ್ಥ0ಭಗಳಿವೆ. ಮ0ಟಪದ ಗೋಡೆಗೆ ಸೇರಿದ0ತೆ ಸಪ್ತಮಾತೃಕೆಯರ ಶಿಲಾ ಪಟ್ಟಿಕೆ ಇದೆ. ಪೂರ್ವ ದಿಕ್ಕಿನಲ್ಲಿರುವ ಗರ್ಭಗೃಹದಲ್ಲಿ ಸಪ್ತಾಶ್ವಗಳ ರಥದ ಮೇಲೆ ಸೂರ್ಯನ ಶಿಲ್ಪವಿದೆ. ಸುಮಾರು ಐದು ಅಡಿ ಎತ್ತರ ಶಿಲ್ಪ ಸಮಭ0ಗಿಯಲ್ಲಿದೆ. ಸೂರ್ಯನ ಎರಡೂ ಕೈಗಳಲ್ಲಿ ಕಮಲದ ಹೂವುಗಳಿವೆ. ಕಿರೀಟ, ಕ0ಠಿಹಾರ, ನಡುಪಟ್ಟಿ, ಜನಿವಾರ ಕು0ಡಲಗಳಿ0ದ ಮೂರ್ತಿ ಅಲ0ಕೃತವಾಗಿದೆ. ಪ್ರಭಾವಳಿಯ ಮೇಲ್ಭಾಗದಲ್ಲಿ ಕೀರ್ತಿ ಮುಖವಿದೆ. ಪೀಠದ ಎರಡೂ ಪಾಶ್ರ್ವಗಳಲ್ಲಿ ಉಷೆ - ಪ್ರತ್ಯುಷಾದೇವಿಯವರ ಶಿಲ್ಪಗಳಿವೆ. ಪಶ್ಚಿಮ ದಿಕ್ಕಿನ ಗರ್ಭಗೃಹದಲ್ಲಿ ವೃತ್ತಾಕಾರದ ಪೀಠ ಮಾತ್ರ ಇದೆ.
ಚಾಳುಕ್ಯ ಶೈಲಿಯ ಕೆತ್ತನೆ - ಗರ್ಭಗುಡಿಯ ಹೊರಸುತ್ತು
ದೇವಾಲಯದ ಹೊರಗೋಡೆಯ ಅಧಿಷ್ಠಾನದಲ್ಲಿ ಜಗತಿ, ಉಪಾನ ಮತ್ತು ಪದ್ಮಗಳಿವೆ. ಬಿತ್ತಿಯಲ್ಲಿ ದೇವಕೋಷ್ಟಕಗಳು, ಅರೆ ಸ್ಥ0ಭಗಳು, ಜಾಲ0ಧ್ರಗಳಿವೆ. ವಿಷ್ಣು, ಕೇಶವ, ಯೋಗಾನರಸಿ0ಹ, ಬ್ರಹ್ಮ, ಶಿವ, ಭೈರವಿ, ಕಾಳಿ, ಸರಸ್ವತಿ ಯಕ್ಷಿಯರ ಸು0ದರ ಉಬ್ಬು ಶಿಲ್ಪಗಳಿವೆ. ದೇವಾಲಯದ ಆವರಣದಲ್ಲಿರುವ ಶಾಸನ ಒ0ದರಲ್ಲಿ ಕ್ರಿ. ಶ. 1209 ರಲ್ಲಿ ಹೊಯ್ಸಳ ದೊರೆ ವಿಷ್ಣುವರ್ಧನ ಬಲ್ಲಾಳನ ಆಳ್ವಿಕೆಯಲ್ಲಿ ಶಿವ, ವಿಷ್ಣು, ಸೂರ್ಯ ದೇವರಿಗಾಗಿ ತ್ರಿಕೂಟಾಚಲ ನಿರ್ಮಿಸಿದ ಉಲ್ಲೇಖ ಕ0ಡುಬರುತ್ತಿದೆ. ಮತ್ತೊ0ದು ಶಾಸನ ಅಲ್ಲಲ್ಲಿ ತೃಟಿತವಾಗಿದ್ದು, ಕ್ರಿ. ಶ. 1116 ರಲ್ಲಿ ಚಾಲುಕ್ಯ ದೊರೆ ತ್ರಿಭುವನ ಮಲ್ಲದೇವನ ಆಳ್ವಿಕೆಯಲ್ಲಿ ಸೋಮೇಶ್ವರ ದೇವರ ಸೇವೆಗಾಗಿ ದಾನ ನೀಡಿದ ಉಲ್ಲೇಖವಿದೆ.





ಪ್ರತೀ ಅಮವಾಸ್ಯೆಯೂ ಶ್ರೀ ಸಾರಿ ದುರ್ಗಾಮಾತೆಗೆ ಪಲ್ಲಕ್ಕಿ ಉತ್ಸವ

ಮಾಗಳ ಗ್ರಾಮದ ಶ್ರೀ ಸಾರಿ ದುರ್ಗಾಮಾತೆಯು ತನ್ನದೇ ಆದ ಬಹು ವಿಶಿಷ್ಟ ಶಕ್ತಿಯನ್ನು ಹೊಂದಿದ್ದು ಅಪಾರ ಭಕ್ತಾದಿಗಳ ಇಷ್ಟಾರ್ಥಸಿದ್ದಿ ದೈವವಾಗಿ ಹೊರಹೊಮ್ಮಿದ್ದಾಳೆ. ಈ ಮಹಾಮಾತೆ ಜಗದೀಶ್ವರಿಗೆ ಪ್ರತೀ ದಿನವೂ ಮಹಾ ಪೂಜಾ ಕೈಂಕರ್ಯಗಳು ಶಾಸ್ತ್ರೋಕ್ತವಾಗಿ ನಡೆಯುತ್ತವೆ. ವಿಶೇಷವಾಗಿ ಪ್ರತೀ ಅಮವಾಸ್ಯೆಯಂದು ಶ್ರೀ ಆದಿಶಕ್ತಿ ಸ್ವರೂಪಳಾದ ಸಾರಿ ದುರ್ಗಾಮಾತೆಗೆ ವಿಶೇಷ ಪೂಜೆ, ಅಲಂಕಾರ, ಪಲ್ಲಕ್ಕಿ ಉತ್ಸವಗಳು ಸಾಕಷ್ಟು ಭಕ್ತಾದಿಗಳ ಉದ್ಘೋಷದೊಂದಿಗೆ ವಿಜೃಂಬಣೆಯಾಗಿ ಜರುಗುತ್ತವೆ. ಪ್ರಾತಃ ಕಾಲದಲ್ಲಿ ಆರಂಭವಾದ ದೇವಿ ಜೂಜಾ ವಿದಿ ವಿದಾನಗಳು ಬೆಳಗಾಗುವುದರೊಳಗಾಗಿ ಮಹಾಮಾತೆಗೆ ಮಹಾ ಆರತಿಯಾಗುತ್ತದೆ.

ಬರುವ ಭಕ್ತಾದಿಗಳ ಮದ್ಯೆ ದೇವಸ್ಥಾನದ ಆವರಣದಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಉತ್ಸವದಲ್ಲಿ ಹರಕೆಹೊತ್ತ ಭಕ್ತಾದಿಗಲಳು ತಮ್ಮ ಧಾರ್ಮಿಕ ಇಚ್ಚಾನುಸಾರ ಸೇವೆಯನ್ನು ಸಲ್ಲಿಸುತ್ತಾರೆ. ನಂತರ ಮಹಾ ಪ್ರಸಾದ ವಿನಿಯೋಗ ದಿನಪೂರ್ತಿ ನಡೆಯುತ್ತದೆ. ಪ್ರತೀ ಅಮವಾಸ್ಯೆಗೂ ಬೇರೆ ಬೇರೆ ಭಕ್ತಾದಿಗಳು ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಡುತ್ತಾರೆ. ಅಂತಯೇ ಈ ನಿಜ ಆಷಾಡ ಮಾಸ ಅಮವಾಸ್ಯೆಯ ಅನ್ನ ಪ್ರಸಾದ ವ್ಯವಸ್ಥೆಯನ್ನು ಮಾಗಳದ ಬಹು ಪ್ರಸಿದ್ದ ಕಿರಾಣಿ ವರ್ತಕರಾದ ಶ್ರೀ ಅಶೋಕ ಪೂಜಾರ ಇವರು ನೆರವೇರಿಸಿದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಲ್ಲಪ್ಪಜ್ಜನವರು ದೇವಿಯ ಬಗ್ಗೆ ಅಪಾರ ಭಕ್ತಿ, ಗೌರವವನ್ನು ಹೊಂದಿದ್ದು ದೇವಿ ದರ್ಶನಕ್ಕೆ ಬರುವ ಎಲ್ಲಾ ಭಕ್ತಾದಿಗಳಿಗೆ ನಗು ಮುಖದಿಂದಲೇ ಬರಮಾಡಿಕೊಂಡು ಅವರ ಕಷ್ಟ- ಸುಖಗಳನ್ನು ವಿಚಾರಿಸಿ ಧಾರ್ಮಿಕ ಆಶೀರ್ವಚನ ನೀಡುತ್ತಾರೆ. ಶ್ರೀ ಆದಿಶಕ್ತಿ ರೂಪಿಣಿಯಾದ ದೇವಿಗೆ ಮಾಗಳ ಗ್ರಾಮವಷ್ಟೇ ಅಲ್ಲದೇ ಹತ್ತಿರದ ಗ್ರಾಮಗಳಾದ ಹೊಸಹಳ್ಳಿ, ಅಲ್ಲೀಪುರ, ಅಯ್ಯನಹಳ್ಳಿ, ಅಂಗೂರು, ಹೂವಿನ ಹಡಗಲಿ, ದಾವಣಗೆರೆ, ಹಾವೇರಿ ಮಲೆನಾಡುಗಳಿಂದಲೂ ಅಪಾರ ಭಕ್ತಾದಿಗಳಿದ್ದಾರೆ. ಪ್ರತೀ ವರ್ಷ ನಡೆಯುವ ತಾಯಿಯ ಜಾತ್ರಾ ಮತ್ತು ಮಹಾ ರಥೋತ್ಸವಕ್ಕೆ ಎಲ್ಲರೂ ತಪ್ಪದೇ ಬರುತ್ತಾರೆ. ಗ್ರಾಮದ ಗೌಡ ಮನೆತನದವರಾದ ದೇವಿಶೆಟ್ರು ಬಾಲಚಂದ್ರಪ್ಪ, ರೇಣುಕಪ್ಪ ನವರು ಅಲ್ಲದೇ ನೆರೆಯ ಆಂಧ್ರಪ್ರದೇಶದಿಂದ ವಲಸೆ ಬಂದ ನಾಗರೆಡ್ಡಿ, ಪೂರ್ಣಚಂದ್ರರೆಡ್ಡಿ ಮತ್ತಿತರರು ದೇವಿ ಆರಾಧನೆಯಲ್ಲಿ ಮತ್ತು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮಲ್ಲಪ್ಪಜ್ಜನವರ ಸುಪುತ್ರನಾದ ಸುರೇಶರವರು ಕೂಡಾ ದೇವಸ್ಥಾನದ ಎಲ್ಲಾ ಆಡಳಿತ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.
ಶ್ರೀ ಮಲ್ಲಪಜ್ಜನವರು & ಹಾಲಸ್ವಾಮಿಯವರು