Blogger Tips and TricksLatest Tips And TricksBlogger Tricks Blogger Tips and TricksLatest Tips And TricksBlogger Tricks

ವರ ಮಹಾಲಕ್ಷ್ಮಿ ಪೂಜಾ ವಿಧಾನ ಮತ್ತು ಮಹಿಮೆ : ಮಾಗಳ ವಾಣಿ Magala Vani

ಭಾರತದ ದಕ್ಷಿಣದ ಭಾಗಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗಗಳಲ್ಲಿ ಮಹಾಲಕ್ಷ್ಮಿ ವೃತದ ಮೂಲಕ ಆಚರಿಸುತ್ತಾರೆ. ಎರಡೂ ಭಾಗಗಳಲ್ಲೂ ಒಂದೇ ದೇವರಾದ ಲಕ್ಷ್ಮಿಯನ್ನು ಕುಟುಂಬದ ಅಭ್ಯುದಯ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ. ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ಅಂದರೆ ವರವನ್ನು ನೀಡುವ ದೇವರು ವರಮಹಾಲಕ್ಷ್ಮಿಯಾಗಿದ್ದಾರೆ ಎಂಬುದು ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. 
 
ವರಮಹಾಲಕ್ಷ್ಮಿ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ (ಎಂಟು ಲಕ್ಷ್ಮಿಯರು) ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ. ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಮತ್ತು ಶಕ್ತಿಯ ಎಂಟು ದೇವತೆಗಳನ್ನು ಪೂಜಿಸಿದ ಮಹತ್ವ ಪುಣ್ಯ ವರಮಹಾಲಕ್ಷ್ಮಿ ದೇವರನ್ನು ಪೂಜಿಸುವುದರಲ್ಲಿದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನಕ್ಕಿಂತ ಮೊದಲು ಶುಕ್ರವಾರದಂದು ಈ ವ್ರತವನ್ನು ಕೈಗೊಳ್ಳಲಾಗುತ್ತದೆ. 
 
ವಿವಾಹವಾದ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ಪ್ರಾತಃ ಕಾಲದಲ್ಲೇ ಸ್ನಾನವನ್ನು ಮುಗಿಸಿ ದಿನದ ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ. ಕುಟುಂಬ ಶಾಂತಿ ಸಮಾಧಾನಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಾರೆ. ಅಷ್ಟ ಲಕ್ಷ್ಮಿಯರ ಪೂಜೆಯನ್ನು ಮಾಡಿದಂತಹ ಪುಣ್ಯ ವರಮಹಾಲಕ್ಷ್ಮಿ ವೃತದಲ್ಲಿ ದೊರೆಯುವುದರಿಂದ ಶ್ರದ್ಧೆ ಭಕ್ತಿ ಪೂಜಿಸುವಾಗ ಇರಲೇಬೇಕು.
 
ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದ ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ಪೂಜೆ ಅಥವ ವರಮಹಾಲಕ್ಷ್ಮಿ ವ್ರತವನ್ನು ತಮ್ಮ ಕುಟುಂಬಗಳ ಏಳಿಗೆಗೆ ಮತ್ತು ಯೋಗ ಕ್ಷೇಮಕ್ಕೆ ಮಾಡುವ ಅಥವ ಆಚರಿಸುವ ಒಂದು ಪ್ರಮುಖ ಪೂಜಾ ಕಾರ್ಯಕ್ರಮ.
ಪ್ರಸ್ತುತ ವರ್ಷದಲ್ಲಿ ವರಲಕ್ಷ್ಮಿ ವ್ರತ ಆಗಸ್ಟ್ 8ರಂದು ಬರುತ್ತದೆ. ವರಮಹಾಲಕ್ಷ್ಮಿ ಪೂಜೆಯು ಆಗಸ್ಟ್ ತಿಂಗಳಿನ ಒಂದು ಶುಕ್ರವಾರ ಬರುತ್ತದೆ ಮತ್ತು ಪೂಜೆಯ ತಯಾರಿಯನ್ನು ಹಿಂದಿನ ದಿನ ಗುರುವಾರವೇ ಆರಂಭವಾಗುತ್ತದೆ. ಪೂಜೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಗುರುವಾರ ಸಂಜೆಯೇ ಸಂಗ್ರಹಿಸಲಾಗುತ್ತದೆ. 
 
ಶುಕ್ರವಾರದ ದಿವಸ ಮುಂಜಾನೆ ಬೇಗನೆ ಎದ್ದು ಮಹಿಳೆಯರು ಸ್ನಾನಮಾಡುತ್ತಾರೆ. ಸಾಂಪ್ರದಾಯಿಕವಾಗಿ ಪೂಜೆಯ ದಿವಸ ಮುಂಜಾನೆ ಏಳುವ ಸಮಯಕ್ಕೆ ಬ್ರಾಹ್ಮೀ ಮುಹೂರ್ತವೆಂದು ಹೇಳುತ್ತಾರೆ. ಆ ನಂತರ ಪೂಜೆಗೆ ಗೊತ್ತುಪಡಿಸಿದ ಸ್ಥಳ ಮತ್ತು ಮನೆಯೆಲ್ಲವನ್ನೂ ಶುಚಿಗೊಳಿಸಿ ಒಂದು ಸುಂದರವಾದ ರಂಗೋಲಿ ಅಥವ "ಕೋಲಂ" ಪೂಜೆ ಮಾಡುವ ಉದ್ದೇಶಿತ ಸ್ಥಳದಲ್ಲಿ ಚಿತ್ರಿಸುತ್ತಾರೆ. ಇದಾದ ಮೇಲೆ ಮುಂದಿನ ಹೆಜ್ಜೆಯೆಂದರೆ "ಕಳಶ" ಸ್ಥಾಪನೆ. ಒಂದು ಕಂಚಿನ ಅಥವ ಬೆಳ್ಳಿ ಚೊಂಬು ತೆಗೆದುಕೊಂಡು ಚೆನ್ನಾಗಿ ಶುಚಿಗೊಳಿಸಿ ಆ ಚೊಂಬಿನ ಮೇಲೆ ಸ್ವಸ್ತಿಕ ಚಿಹ್ನೆಯನ್ನು ಬರೆದು ಶ್ರೀಗಂಧದ ಲೇಪನ ಮಾಡುತ್ತಾರೆ. ಕಳಶದ ಚೊಂಬಿನಲ್ಲಿ ಅಕ್ಕಿ ಅಥವ ನೀರು, ನಾಣ್ಯಗಳು, ಒಂದು ನಿಂಬೆಹಣ್ಣು, ಐದು ವೀಳ್ಯದ ಎಲೆಗಳು ಮತ್ತು ಅಡಿಕೆಯನ್ನು ಹಾಕಿ ತುಂಬಿಸುತ್ತಾರೆ. ಈ ರೀತಿಯ ಚೊಂಬಿನಲ್ಲಿ ತುಂಬುವ ಸಂಪ್ರದಾಯವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ ಮತ್ತು ಅರಿಶಿನ, ಬಾಚಣಿಗೆ, ಕನ್ನಡಿ, ಸಣ್ಣ ಕಪ್ಪು ಬಣ್ಣದ ಬಳೆಗಳು ಮತ್ತು ಕಪ್ಪು ಬಣ್ಣದ ಮಣಿಗಳನ್ನು ಚೊಂಬಿನ ಪಕ್ಕದಲ್ಲಿ ಜೋಡಿಸುತ್ತಾರೆ. ಕೆಲವು ಪ್ರದೇಶಗಳಲ್ಲಿ ಚೊಂಬಿನ ಸುತ್ತಲೂ ಒಂದು ಬಟ್ಟೆಯನ್ನು ಕಟ್ಟಿ ಚೊಂಬಿನ ಬಾಯಿಯಲ್ಲಿ ಮಾವಿನೆಲೆಯನ್ನು ಇಟ್ಟು ನಿಲ್ಲಿಸುತ್ತಾರೆ. ಕೊನೆಯಲ್ಲಿ ಒಂದು ತೆಂಗಿನಕಾಯನ್ನು ಶುದ್ಧೀಕರಿಸಿ, ಅದರ ಮೇಲೆ ಅರಶಿನವನ್ನು ಬಳಿದು ತೆಂಗಿನಕಾಯಿಯ ಜುಟ್ಟು ಮೇಲೆ ಬರುವ ಹಾಗೆ ಚೊಂಬಿನ ಮೇಲೆ ಕೂಡಿಸುತ್ತಾರೆ. ಈ ತೆಂಗಿನಕಾಯಿಗೆ ಲಕ್ಷ್ಮಿ ದೇವಿಯ ಮುಖವಾಡವನ್ನು ಕಟ್ಟುತ್ತಾರೆ, ಅಥವ ಮುಖವಾಡದ ಬದಲು ಅರಿಶಿನದಲ್ಲಿ ಲಕ್ಷ್ಮಿ ದೇವಿಯ ಚಿತ್ರವನ್ನು ಬಿಡಿಸುತ್ತಾರೆ. ಈ ರೀತಿ ಮಾಡುವುದರಿಂದ ಕಳಶವು ಲಕ್ಷ್ಮಿ ದೇವಿಯನ್ನು ಸಾಂಕೇತಿವಾಗಿ ಪ್ರತಿನಿಧಿಸುತ್ತದೆ. ಕ್ಯಾರೆಟ್ ಪಾಯಸ- ವರಮಹಾಲಕ್ಷ್ಮಿ ಹಬ್ಬಕ್ಕೆ ಸ್ಪೆಷಲ್ ಕೆಲವು ಪ್ರದೇಶಗಳಲ್ಲಿ ಕಳಶದ ಹಿಂದೆ ಒಂದು ಕನ್ನಡಿ ಇಡುವ ಪದ್ಧತಿಯಿದೆ. ಈಗಂತೂ ಮಾರುಕಟ್ಟೆಯಲ್ಲಿ ವಿಶೇಷವಾಗಿ ತಯಾರಿಸಿದ ಲಕ್ಷ್ಮಿ ದೇವಿ ಲಭ್ಯವಿರುವ ಚೊಂಬುಗಳು ದೊರಕುತ್ತವೆ. ಕಳಶವನ್ನು ಸಾಮಾನ್ಯವಾಗಿ ಒಂದು ಅಕ್ಕಿಯ ಪೀಠದ ಮೇಲೆ ಇರಿಸುತ್ತಾರೆ. ಪೂಜೆ ಮಾಡುವಾಗ ಮೊದಲು ಗಣೇಶನನ್ನು ಪೂಜೆ ಮಾಡಲಾಗುತ್ತದೆ. ತದನಂತರ ವರಮಹಾಲಕ್ಷ್ಮಿ ದೇವಿಯ ಪೂಜೆ ಆರಂಭವಾಗುತ್ತದೆ. 
 
ಪೂಜೆಯಲ್ಲಿ ಲಕ್ಷ್ಮಿ ದೇವಿಯ ಶ್ಲೋಕಗಳನ್ನು ಹೇಳುವುದರ ಮೂಲಕ ಮತ್ತು ಲಕ್ಷ್ಮಿ ಸಹಸ್ರನಾಮಗಳನ್ನು ಸ್ಫಟಿಸುವುದು ಕೂಡಿರುತ್ತವೆ. ಕಳಶಕ್ಕೆ ಆರತಿಯನ್ನು ಮಾಡುತ್ತಾರೆ. ವಿವಿಧ ಸಿಹಿತಿಂಡಿಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಕೆಲವರು ಪೊಂಗಲ್ ಅರ್ಪಿಸುತ್ತಾರೆ. ಕೆಲವೆಡೆ ಪೂಜೆ ಮಾಡಿದ ಮಹಿಳೆಯರು ತಮ್ಮ ಕೈ ಮಣಿಕಟ್ಟಿನಸುತ್ತಲು ಹಳದಿದಾರವನ್ನು ಕಟ್ಟಿಕೊಳ್ಳುತ್ತಾರೆ. ವರಮಹಾಲಕ್ಷ್ಮಿ ಮಾಡುವ ಮಹಿಳೆಯು ಕೆಲವು ವಿಧದ ಆಹಾರಗಳನ್ನು ವರ್ಜಿಸುತ್ತಾರೆ. ಈ ಪದ್ಧತಿ ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಕೆಲವು ಪ್ರದೇಶಗಳಲ್ಲಿ ಪೂಜೆ ಮಾಡುವ ಮಹಿಳೆಯರು ಪೂಜೆ ಮುಗಿಸುವವರೆಗೆ ಉಪವಾಸದಲ್ಲಿರುತ್ತಾರೆ. ಸುತ್ತಮುತ್ತಲಿನ ಮನೆಗಳಲ್ಲಿರುವ ಮಹಿಳೆಯರನ್ನು ಆಹ್ವಾನಿಸಿ ಅವರಿಗೆ ವಿಳ್ಯದ ಎಲೆ, ಅಡಿಕೆ ಮತ್ತು ಸುಣ್ಣದ ತಾಂಬೂಲವನ್ನು ಕೊಡುತ್ತಾರೆ. ಹಾಗೂ ಸಾಯಂಕಾಲ ಲಕ್ಷ್ಮಿ ಕಳಶಕ್ಕೆ ಆರತಿಯನ್ನು ಮಾಡುತ್ತಾರೆ.
 
 ವರಮಹಾಲಕ್ಷ್ಮೀ ವ್ರತದ ಆಚರಣೆ ಹೇಗೆ? 
 
 ಮರುದಿನ, ಅಂದರೆ ಶನಿವಾರ, ಸ್ನಾನಮಾಡಿದ ನಂತರ ಕಳಶವನ್ನು ತೆರೆದು ಎಲ್ಲವನ್ನು ಬಿಚ್ಚಿ, ಅದರಲ್ಲಿ ಇಟ್ಟಿದ್ದ ನೀರನ್ನು ಮನೆಯ ಎಲ್ಲಾ ಪ್ರದೇಶದಲ್ಲಿ ಚಿಮುಕಿಸುತ್ತಾರೆ. ನೀರಿನ ಬದಲು ಅಕ್ಕಿಯನ್ನಿಟ್ಟಿದ್ದರೆ, ಅದರಲ್ಲಿ ಅನ್ನ ಮಾಡಿ ಆ ಅನ್ನವನ್ನು ಊಟಕ್ಕೆ ತಯಾರಿಸಿದ ಅನ್ನದ ಜೊತೆ ಬೆರಸುತ್ತಾರೆ. ವರಮಹಾಲಕ್ಷ್ಮಿ ಪೂಜೆಯನ್ನು ಮಾಡಲು ಅಂಥಹ ಕಟ್ಟು ನಿಟ್ಟದ ನಿಯಮಗಳೇನಿಲ್ಲ ಮತ್ತು ಸರಳವಾಗಿಯೂ ಮಾಡಬಹುದು. ಭಕ್ತಿಯಿಂದ ಸರಳವಾಗಿ ಪ್ರಾರ್ಥನೆಸಲ್ಲಿಸಿದರೂ ಸಹ ಲಕ್ಷ್ಮಿದೇವಿಯನ್ನು ಮೆಚ್ಚಿಸಬಹುದು. 
 
ವರ ಮಹಾಲಕ್ಷ್ಮಿ ಕಥಾ ಹಿನ್ನಲೆ

ಪೂರ್ವಕಾಲದಲ್ಲಿ ಸತ್ಯಲೋಕವಾಸಿಗಳಾದ ಋಷಿಶ್ರೇಷ್ಠರೆಲ್ಲರೂ ನೈಮಿಶಾರಣ್ಯದಲ್ಲಿ ಒಟ್ಟಾಗಿ ಸೇರಿ ಪುರಾಣಿಕ ಶಿಖಾಮಣಿಯಾದ ಸೂತಮಹರ್ಷಿಯನ್ನು ಕುರಿತು- 'ಎಲೈ ಪುರಾಣಪುರುಷೋತ್ತಮನೆ ! ತ್ರಿಕಾಲಜ್ಞಾನಿಯಾದ ನೀನು ನಮ್ಮಲ್ಲಿ ಅನುಗ್ರಹ ಮಾಡುವುದಾದರೆ, ಲೋಕದಲ್ಲಿ ಸರ್ವ ಸೌಭಾಗ್ಯಗಳನ್ನೂ ಕೊಡುವ ಉತ್ತಮವಾದ ವ್ರತವನ್ನು ಹೇಳು" ಎಂದು ಕೇಳಿದರು. ಸಂತುಷ್ಟನಾದ ಸೂತಮಹಾಮುನಿ ಆಗ ಪುಂಖಾನುಪುಂಖ ಹೇಳಿದ ವಿಷಯವಿದು... ಎಲೈ ಋಷಿಗಳಿರಾ ! ಕೇಳಿ, ಲೋಕದಲ್ಲಿ ಭಕ್ತಿಯಿಂದ ಪೂಜಿಸುವವರಿಗೆ ಸಕಲ ಇಷ್ಟಾರ್ಥಗಳನ್ನು ಕೊಡುವ ಅತ್ಯುತ್ತಮವಾದ ವ್ರತವೊಂದುಂಟು. ಅವರ ವಿವರವನ್ನು ನಿಮಗೋಸ್ಕರ ಹೇಳುವೆನು ಕೇಳಿ- ಮನೋಹರವಾದ ಶೃಂಗಗಳಿಂದ ಒಪ್ಪುತ್ತಿರುವ ಕೈಲಾಸಪರ್ವತವು ದೇವನದಿಗಳಿಂದ ಪೂರ್ಣವಾಗಿ ಫಲಭರಿತವಾದ ನಾನಾಬಗೆಯ ವೃಕ್ಷಸಮೂಹದಿಂದ ಕೂಡಿ ಕಾಮಧೇನು ಕಲ್ಪವೃಕ್ಷ ಸೇವಿತಮಾಗಿ ಸಕಲ ಸುಖಗಳಿಗೂ ಆವಾಸಸ್ಥಾನವಾಗಿರುವುದು. ಆದ ಕಾರಣ ಯಕ್ಷರಾಕ್ಷಸ ಗರುಡ ಗಂಧರ್ವ ದೇವಮಾನುಷಾದಿಗಳು ತಮ್ಮ ಪೂರ್ವ ಪುಣ್ಯಾನುಸಾರ ಸೇರಿ ಅಲ್ಲಿಗೆ ಒಡೆಯನಾದ ಪಾರ್ವತೀಶ್ವರನಿಗೆ ಸೇವೆ ಸಲ್ಲಿಸುತ್ತಿರುವರು. ಒಂದಾನೊಂದು ಕಾಲದಲ್ಲಿ ಹರ್ಷಯುಕ್ತನಾಗಿ ದೇವದೇವನಾದ ಪರಮೇಶ್ವರನು ಪಾರ್ವತಿಯಾಡನೆ ಸಂತೋಷದಿಂದ ಕುಳಿತಿರುವಾಗ ಲೋಕಾನುಗ್ರಹಾರ್ಥವಾಗಿ ಜಗನ್ಮಾತೆಯಾದ ಪಾರ್ವತಿಯು ಪರಮೇಶ್ವರನನ್ನು ಕುರಿತು, 'ಎಲೈ ಮಹಾದೇವನೆ ! ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟುಮಾಡುವ ವ್ರತವಾವುದು? ಅದನ್ನು ನನಗೆ ಹೇಳು" ಎಂದು ಕೇಳಿದಳು.
 
ಆಗ ಪರಮೇಶ್ವರನು- 'ಎಲೌ ಪಾರ್ವತಿಯೆ ! ಕೇಳು. ಸರ್ವ ಸಂಪತ್ಪ್ರದವಾದ ಪುತ್ರಪೌತ್ರದಾಯಕವಾದ ಸನ್ಮಂಗಳ ಸಂತಾನಕರವಾದ ವರಲಕ್ಷ್ಮೀವ್ರತವೆಂಬುದೊಂದುಂಟು. ಈ ವ್ರತವನ್ನು ಭಕ್ತಿ ಸಂಪನ್ನರಾದ ಹೆಂಗಸರಾಗಲಿ, ಗಂಡಸರಾಗಲಿ, ಮಕ್ಕಳಾಗಲಿ ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು" ಎಂದನು. ಆಗ ಆನಂದತುಂದಿಲಳಾದ ಪಾರ್ವತಿ, 'ಸ್ವಾಮಿ ! ಆ ವ್ರತದ ನಿಯಮವೇನು? ಅದನ್ನು ಹೇಗೆ ಮಾಡಬೇಕು? ಆ ವ್ರತಕ್ಕೆ ಅಧಿದೇವತೆ ಯಾರು?" ಎಂದು ಕೇಳಿದಳು. ಆಗ ಪರಮೇಶ್ವರನು, 'ಆ ವ್ರತಕ್ಕೆ ಅಧಿದೇವತೆ ಮಹಾಲಕ್ಷ್ಮಿ. ಇದನ್ನು ಶ್ರಾವಣಮಾಸದಲ್ಲಿ ಪೌರ್ಣಿಮೆ ಸಮೀಪಸ್ಥವಾದ ಭೃಗುವಾರದಲ್ಲಿ ಮಾಡಬೇಕು. ಹಾಗೆ ಮಾಡಿದ ಭಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುವುವು. ಇದು ಸತ್ಯ.
 
 ಈ ವಿಷಯದಲ್ಲಿ ಪ್ರಸಿದ್ಧವಾದ ಒಂದು ಕಥೆಯುಂಟು. ಅದನ್ನು ನಿನಗೋಸ್ಕರವಾಗಿ ವಿಸ್ತರಿಸಿ ಹೇಳುವೆನು, ಕೇಳು" ಎಂದು ಕಥೆಯನ್ನು ಹೇಳಲು ಅನುವಾದನು... ಪೂರ್ವ ಕಾಲದಲ್ಲಿ ಮಹಾ ವೈಭವಯುಕ್ತವಾದ ವಿದರ್ಭದೇಶಕ್ಕೆ ರಾಜಧಾನಿಯಾದ ಕುಂಡಿನನಗರದಲ್ಲಿ ದರಿದ್ರಳಾದರೂ ಸದಾಚಾರ ಸಂಪನ್ನಳಾದ, ಪತಿ ಶುಶ್ರೂಷೆಯೆ ಮುಖ್ಯವೆಂದು ತಿಳಿದು ಸದಾ ಸಂತೋಷಚಿತ್ತಳಾಗಿ ಪತಿಯ ಮನಸ್ಸನ್ನು ನೋಯಿಸದೆ ಸದ್ವರ್ತನೆ ಉಳ್ಳವಳಾಗಿದ್ದ ಚಾರುಮತಿ ಎಂಬ ಸ್ತ್ರೀ ಇದ್ದಳು. ಇವಳ ಸದಾಚಾರ ಸಂಪನ್ನತೆಗೆ ಮೆಚ್ಚಿ ಕರುಣಾಳುವಾದ ಮಹಾಲಕ್ಷ್ಮಿಯು, ಒಂದು ದಿನ ಚಾರುಮತಿಯು ಮಲಗಿ ನಿದ್ರಿಸುತ್ತಿರುವಾಗ ಸ್ವಪ್ನದಲ್ಲಿ ಪ್ರತ್ಯಕ್ಷಳಾಗಿ ಬಂದು ಹೇಳಿದಳು- 'ಎಲೌ ಪತಿವ್ರತೆಯಾದ ಚಾರುಮತಿಯೆ ! ನಿನ್ನ ಗುಣಶೀಲಗಳಿಗೆ ಮೆಚ್ಚಿ ನಿನ್ನ ಪೂರ್ವ ಪುಣ್ಯಾನುಸಾರವಾಗಿ ನಿನ್ನಲ್ಲಿ ಅನುಗ್ರಹ ಮಾಡಲು ಬಂದಿರುವ ಮಹಾಲಕ್ಷ್ಮಿ ನಾನು. ಈಗ ನಾನು ಹೇಳುವ ವಿಷಯವನ್ನು ಗ್ರಹಿಸಿಕೊಂಡು ನೀನು ಆಚರಿಸಿದರೆ ಅದರಿಂದ ನಿನಗೆ ಮಹಾಪ್ರಯೋಜನ ಉಂಟಾಗುವುದು. ನಿನ್ನ ದಾರಿದ್ರ್ಯವು ನಾಶವಾಗಿ ನಿನಗೆ ಅಷ್ಟೈಶ್ವರ್ಯವು ಪ್ರಾಪ್ತಿಯಾಗುವುದು. ಆದ ಕಾರಣ ಶ್ರಾವಣ ಮಾಸದಲ್ಲಿ ಬರುವ ಎರಡನೆಯ ಶುಕ್ರವಾರದ ದಿನ ಪ್ರದೋಷ ಸಮಯಕ್ಕೆ ಸರಿಯಾಗಿ ವಿಧಿವತ್ತಾಗಿ ನನ್ನ ಪೂಜೆಯನ್ನು ಮಾಡಿದರೆ ನಾನು ಅವರಿಗೆ ಸಕಲ ಭೋಗಭಾಗ್ಯಗಳನ್ನು ಕೊಡುವೆನು. ಯಾರಿಗೆ ಪುಣ್ಯ ಸಂಪರ್ಕವಿರುವುದೊ, ಅಂಥವರಿಗೆ ಈ ವ್ರತದಲ್ಲಿ ಭಕ್ತಿ ಹುಟ್ಟುವುದಲ್ಲದೆ ಅನ್ಯರಿಗೆಂದಿಗೂ ಹುಟ್ಟಲಾರದು. ಇಹಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುವರೊ ಅವರೇ ಧನ್ಯರು ! ಅವರೇ ಶೂರರು ! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು. ಅವರೇ ಪಂಡಿತರು, ಅಂಥವರೇ ಸ್ತೋತ್ರಾರ್ಹರು, ಬಹಳವಾಗಿ ಹೇಳುವುದೇನು? ಅವರೇ ಸರ್ವೋತ್ತಮರು. ಯಾರು ನನ್ನ ಕಟಾಕ್ಷಕ್ಕೆ ಬಾಹಿರರಾಗಿರುವರೊ ! ಅವರ ಬಾಳು ಅಜಗಳಸ್ತನದಂತೆ ವ್ಯರ್ಥವೇ ಸರಿ. ಆದ ಕಾರಣ ನೀನು ಈ ವ್ರತವನ್ನು ಮಾಡಿ ಧನ್ಯಳಾಗು".
 
ಹೀಗೆ ನಿದ್ರೆಯಲ್ಲಿ ಉಪದೇಶಿಸಿ ಮಹಾಲಕ್ಷ್ಮಿಯು ಕಣ್ಮರೆಯಾದಳು.  ಆಗ ಚಾರುಮತಿಯು ಭ್ರಾಂತಳಾಗಿ ನಿದ್ರೆಯಿಂದೆದ್ದು ನಡೆದ ಸಂಗತಿಯನ್ನೆಲ್ಲ ತನ್ನವರಿಗೆ ಹೇಳಿ ಅವರೊಡನೆ ಆನಂದಿಸುತ್ತ ಕೆಲವು ದಿವಸಗಳನ್ನು ಕಳೆಯಲು ಶ್ರಾವಣಮಾಸದ ಎರಡನೆಯ ಶುಕ್ರವಾರ ಬಂದಿತು. ಆ ದಿನ ಭಕ್ತಿವಂತರಾಗಿ ಶ್ರದ್ಧೆಯಿಂದ ಕಲ್ಪೋಕ್ತಪ್ರಕಾರವಾಗಿ ಬಹು ಜನ ಭಕ್ತರು ವರಮಹಾಲಕ್ಷ್ಮಿಯನ್ನು ಪೂಜಿಸಿ ಸಂತೋಷದಿಂದ ಕೋರಿಕೆಗಳನ್ನು ಕೈಗೂಡಿಸಿಕೊಂಡು ಸುಖದಿಂದ ಬಾಳುತ್ತಿದ್ದರು. ಇತ್ತ ದರಿದ್ರಳಾದ ಚಾರುಮತಿಯು ನಿಯಮದಿಂದ ಈ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. ಪುತ್ರಪೌತ್ರಾದಿಗಳಿಂದ ಕೂಡಿ, ಸುಖವನ್ನು ಅನುಭವಿಸುತ್ತ ಬಡವರಿಗೆ ಅನ್ನದಾನ ಮಾಡಿ, ಬಂಧುವರ್ಗದವರನ್ನು ಪ್ರೀತಿಯಿಂದ ಕಾಪಾಡುತ್ತ ಇಹಲೋಕದಲ್ಲಿ ಅನಂತವಾದ ಅಪಾರಸೌಖ್ಯ ಅನುಭವಿಸಿ, ಪರಲೋಕದಲ್ಲಿ ಶ್ರೇಷ್ಠವಾದ ಪತಿಸಾಯುಜ್ಯವನ್ನು ಪಡೆದಳು. ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಭಾವದಿಂದ ಈ ವ್ರತವನ್ನು ಆಚರಿಸುವರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು, ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು. - ಪರಮೇಶ್ವರ ಕಥೆಯನ್ನು ಹೇಳಿ ಮುಗಿಸಲು, ಪಾರ್ವತಿಯು, 'ಎಲೈ ದೇವದೇವನೆ ! ನನ್ನಲ್ಲಿ ನಿನಗೆ ದಯೆಯುಂಟಾದರೆ ಈ ವಿಧಾನವನ್ನು ವಿವರವಾಗಿ ಹೇಳಬೇಕು" ಎಂದು ಕೇಳಿಕೊಂಡಳು. 
 
ಆಗ ಪರಮೇಶ್ವರನು ಪೂಜಾ ವಿಧಾನಗಳನ್ನು ಹೀಗೆ ವಿವರಿಸಿದನು- 'ಕೇಳೌ ದೇವಿಯೆ ! ಕೇವಲ ಪುಣ್ಯಪ್ರದವಾದ ಶ್ರಾವಣಮಾಸದ ಎರಡನೆಯ ಶುಕ್ರವಾರದ ದಿನ ಭಕ್ತಿಯುಳ್ಳ ಸ್ತ್ರೀಯರಾಗಲಿ, ಪುರುಷರಾಗಲಿ ಅಭ್ಯಂಜನವನ್ನು ಮಾಡಿಕೊಂಡು ಮಂಗಳಸ್ನಾನಾನಂತರ ಶುಭವಸ್ತ್ರಗಳನ್ನು ಧರಿಸಬೇಕು. ಮನೆಯಲ್ಲಿ ರಂಗವಲ್ಯಾದಿಗಳಿಂದ ಅಲಂಕೃತವಾದ ಶುದ್ಧ ಪ್ರದೇಶದಲ್ಲಿ ಮನೋಹರವಾದ ಮಂಟಪವನ್ನು ನಿರ್ಮಿಸಬೇಕು. ಅದರ ಮಧ್ಯದಲ್ಲಿ ಪಂಚವರ್ಣದಿಂದ ಕೂಡಿದ ಅಷ್ಟದಳ ಪದ್ಮವನ್ನು ರಚಿಸಿ, ಅದರ ಮೇಲೆ ಮಾವಿನ ಚಿಗುರುಗಳಿಂದ ಕೂಡಿದ ಕಲಶವನ್ನು ಇಟ್ಟು ಪ್ರಾಣಪ್ರತಿಷ್ಠಾಪನಪುರಸ್ಸರವಾಗಿ ವರಮಹಾಲಕ್ಷ್ಮಿಯನ್ನು ಪೂಜಿಸಬೇಕು. ಪದ್ಮಾಸನೆ, ಪದ್ಮಊರು, ಪದ್ಮಾಕ್ಷಿ, ಪದ್ಮ ಸಂಭವೆ ಎಂಬ ಮಂತ್ರ ಪೂರ್ವಕವಾಗಿ ಷೋಡಶೋಪಚಾರ ಪೂಜೆಯಿಂದ ದೇವಿಯನ್ನು ತೃಪ್ತಿಪಡಿಸಿ, ಯೋಗ್ಯನಾದ ಬ್ರಾಹ್ಮಣನಿಗೆ ಉಪಾಯನ ದಾನವನ್ನು ಕೊಡಬೇಕು. ಸುವಾಸಿನಿಯರನ್ನು ಸಮಾರಾಧನೆ ಸುಗಂಧ ತಾಂಬೂಲಗಳಿಂದ ತೃಪ್ತಿಪಡಿಸಬೇಕು.
 
ಅನಂತರ ಭಕ್ತಿಯುಕ್ತರಾದ ಬ್ರಾಹ್ಮಣ ಸುವಾಸಿನಿಯರಿಗೆ ಭೋಜನ ಮಾಡಿಸಿ, ಭೂರಿದಕ್ಷಿಣೆಗಳನ್ನು ಕೊಟ್ಟು ಈ ಕಥೆಯನ್ನು ಕೇಳಬೇಕು". ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಇಷ್ಟೆಲ್ಲಾ ಹೇಳಿದಾಗ, ಋಷಿಗಳು ಸಂತೋಷ ಭರಿತರಾದರು. ಇಂಥ ವರ ಮಹಾಲಕ್ಷ್ಮಿ ವ್ರತವನ್ನು ಯಾರು ಮಾಡುವರೊ, ಈ ಕಥೆಯನ್ನು ಯಾರು ಕೇಳುವರೊ ಅವರಿಗೆ ದಾರಿದ್ರ್ಯ ದುಃಖಾದಿಗಳು ನಾಶವಾಗಿ ಪುತ್ರಪೌತ್ರಾದಿ ಸಂಪತ್ತಿಯಿಂದ ಸಕಲ ಭಾಗ್ಯಗಳೂ ಕೈಗೂಡುತ್ತವೆ.

ಆಧಾರ : 
http://kannada.oneindia.com/festivals/shravana/2002/1308varalakshmi.html
http://kannada.boldsky.com/inspiration/short-story/rituals-varalakshmi-puja-008051.html
http://kannada.boldsky.com/inspiration/how-perform-varamahalakshmi-puja-008047.html

ಮಾಗಳ(ರಂಗಾಪುರ) ಗ್ರಾಮದ ಅಪರೂಪದ ಉಗ್ರ ನರಸಿಂಹ ಸ್ವಾಮಿ ದೇವರು: ಮಾಗಳ ವಾಣಿ: Magala Vani

ಮಾಗಳ ವಾಣಿ:

ಮಾಗಳ(ರಂಗಾಪುರ) ಗ್ರಾಮದ ಅಪರೂಪದ ಉಗ್ರ ನರಸಿಂಹ ಸ್ವಾಮಿ ದೇವರು:

ಈ ದೇವಸ್ಥಾನದ ಮುಂಭಾಗದಲ್ಲಿರುವ ಕಂಬ ಶಾಸನದ ಪ್ರಕಾರ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಆಗ್ರಹಾರವಾಗಿದ್ದ ಮಾಗಳದ 200 ಮಹಾಜನರು, ಉಗ್ರ ನರಸಿಂಹ ಸ್ವಾಮಿ ನಿತ್ಯ ಪೂಜೆಗೆ ಪತ್ರೆ, ಹೂವು ಬೆಳೆಯಲು 200 ಎಕರೆ ಜಮೀನು ನೀಡಿದ್ದರು. ಪ್ರತಿ ವರ್ಷವೂ ಅದೇ 200 ಮಹಾಜನರ ಕುಟುಂಬದವರು ಬಂದು ಪೂಜೆ ಸಲ್ಲಿಸುವ ಪ್ರತೀತಿ ಇದೆ

ಮಾಗಳ : ಮಾಗಳ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಮಾಗಳ ಗ್ರಾಮದ ಹತ್ತಿರ ಶ್ರೀ ರಂಗಾಪುರ ನರಸಿಂಹಸ್ವಾಮಿ ಗುಡಿ ಚಾಲುಕ್ಯ ಅರಸ ತ್ರೈಲೋಕ್ಯ ಮಲ್ಲ ದೇವನ ಕಾಲದಲ್ಲಿ ಶ್ರೀ ನರಸಿಂಹದೇವರಿಗೆ ಮತ್ತು ಗಣಪತಿ ದೇವರಿಗೆ ಸೇವಾ ಕಾರ್ಯಕ್ಕಾಗಿ ಕೆಲ ಭೂಮಿಯನ್ನು ದತ್ತಿ ಕೊಟ್ಟರು. ಆಗ ಗ್ರಾಮದ ಹೆಸರು ಮಾಗಳ. ಇಲ್ಲಿನ ಸೂರ್ಯನಾರಾಯಣ ಸ್ವಾಮಿ ಗಡಿಯನ್ನು ತ್ರಿಕೂಟಾ ದೇವಾಲಯವೆಂದು, ಶಿವ, ವಿಷ್ಣು ಮತ್ತು ಸೂರ್ಯದೇವರಿಗಾಗಿ ಕಟ್ಟಿಸಿದರು. ಈ ದೇವಾಲಯ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡು ಸುಂದರವಾಗಿದೆ.


ಶ್ರೀ ವೇಣುಗೋಪಾಲ ಸ್ವಾಮಿ ಗುಡಿ ಶಾಸನ ಬ್ರಾಹ್ಮಣ ಸೇನಾಪತಿ ಮತ್ತು ಅರಸನ ಮಂತ್ರಿಯಾಗಿದ್ದ ಮಾಧವನ ಶೌರ್ಯ ಪರಾಕ್ರಮವನ್ನು ಹೊಗಳಿದೆ. ಈ ಗ್ರಾಮದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ತುಂಗಭದ್ರಾ ನದಿಯು ಹರಿದಿದೆ. ಈ ತೀರದ ಒಂದು ದಡದಲ್ಲಿ ಮಾವಿನತೋಪು ಬೆಳೆದಿದ್ದು ಇದನ್ನು ಮಾವಿನ ಮರದ ಕೊಳವೆಂದು ಕರೆಯುತ್ತಿದ್ದರು. ಶಾಸನದಲ್ಲಿ ಇದನ್ನು ‘ಮಾಂಗ’ ಎಂದು ಕರೆಯುತ್ತಿದ್ದು ನಂತರ ‘ಮಾಗಳ’ವಾಗಿ ಪರಿವರ್ತನೆಯಾಗಿದೆ.

ಉಗ್ರ ನರಸಿಂಹ ಸ್ವಾಮಿಯ ಸ್ವರೂಪ ಮತ್ತು ಹಿನ್ನಲೆ :

ನರಸಿಂಹ ವಿಷ್ಣುವಿನ ದಶಾವತಾರಗಳಲ್ಲಿ ನರಸಿಂಹಾವತಾವೂ ಒಂದು. ನರಸಿಂಹಾವತಾರವನ್ನು ವಿಷ್ಣುವಿನ ನಾಲ್ಕನೆಯ ಅವತಾರ ಎಂಬುದಾಗಿ ಹೇಳಲಾಗುತ್ತದೆ..
ಹಿರಣ್ಯ ಕಶಿಪು ತನ್ನ ಮಗನಿಗೆ ಅಂಟಿಕೊಂಡಿದ್ದ ನಾರಾಯಣನ ಹುಚ್ಚನ್ನು ಬಿಡಿಸಲು, ಆನೆಯ ಕಾಲಲ್ಲಿ ತುಳಿಸಿದ. ಬೆಟ್ಟದಿಂದ ಕೆಳಗೆಸೆದ. ಹೆತ್ತ ತಾಯಿ ಧರ್ಮಕಾಂತೆಯಿಂದ ವಿಷಪ್ರಾಶನವನ್ನೂ ಮಾಡಿಸಿದ. ಆದರೆ ಪ್ರಹ್ಲಾದ ಶ್ರೀಮನ್ನಾರಾಯಣ ಎಲ್ಲೆಲ್ಲೂ ಇರುವನೆಂದ.

ಕೋಪಗೊಂಡ ಹಿರಣ್ಯಕಶಿಪು, ಈ ಅರಮನೆಯ ಕಂಬದಲ್ಲಿ ಇರುವನೇ ನಿನ್ನ ನಾರಾಯಣ ಎಂದ. ದೃಢ ಭಕ್ತಿಯಲ್ಲಿ ಪ್ರಹ್ಲಾದನು ಶ್ರೀಮನ್ನಾರಾಯಣನ ಜಪಿಸಿದಾಗ, ಕಂಬದಿಂದೊಡೆದು ಹೊರಬಂದ ಉಗ್ರನರಸಿಂಹ..ತನ್ನ ಪರಮ ಭಕ್ತನಾದ ಪ್ರಹ್ಲಾದನಿಗೆ ದರ್ಶನ ನೀಡಿ ಹಿರಣ್ಯಕಶಿಪು ಪಡೆದ ವರಕ್ಕೆ ಚ್ಯುತಿಯಾಗದಂತೆ, ಹಗಲೂ ಅಲ್ಲದ ರಾತ್ರಿಯೂ ಅಲ್ಲದ (ಸೂರ್ಯಾಸ್ತವಾಗುವ) ಹೊತ್ತು ಮುಳುಗುವ ಹೊತ್ತಿನಲ್ಲಿ , ಮನೆಯ ಒಳಗೂ ಅಲ್ಲದ ಹೊರಗೂ ಅಲ್ಲದ ಸ್ಥಳದಲ್ಲಿ ಅಂದರೆ ಮುಂಬಾಗಿಲ ಹೊಸಲಿನ ಮೇಲೆ, ದೇವರಾಗಲೀ, ಮನುಷ್ಯನಾಗಲೀ ಅಲ್ಲದ ರೂಪದಲ್ಲಿ ಅಂದರೆ ಅರ್ಧ ಸಿಂಹ ಹಾಗೂ ಅರ್ಧ ನರ ಒಟ್ಟಾರೆಯಾಗಿ ನರಸಿಂಹಾವತಾರದಲ್ಲಿ, ಯಾವುದೇ ಆಯುಧಗಳ ನೆರವಿಲ್ಲದೆ ಕೇವಲ ಕೈ ಉಗುರ ನೆರವಿನಿಂದ ಹಿರಣ್ಯಕಶಿಪುವಿನ ಕರುಳು ಬಗೆದು ಮಾಲೆ ಹಾಕಿಕೊಂಡ.

ಮಾಗಳ ವಾಣಿ : ಮಾಗಳ ಮ್ಯಾಪ್, Magala Maps and Grama Panchayath Magala Members2015





ಶ್ರೀ ಮಂಗಳಗೌರಿ ವೃತ ಆಚರಣೆ ಮತ್ತು ಮಹತ್ವ


ಕೃಪೆ: http://poojavidhana.blogspot.in/2008/08/sri-mangala-gowri-vrata.html
ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ 5 ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ (triangle) ಮಡಿಸಿ ಹಿಂದೆ ಇಡಬೇಕು.

ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ತಂಬಿಟ್ಟಿನ ಆರತಿ ಬೇಕಾಗುತ್ತೆ.ಮೊದಲು ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರಿ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ ಆರತಿ ಮಾಡಬೇಕು. ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ.ಈ ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ) ಹಿಡಿಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ, ನೀವು ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಳ್ಳಿ. ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಇದನ್ನು ಬಾಗಿನದಲ್ಲಿ ಇಟ್ಟು ಕೊಡಿ.
ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.

ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ. 

ಮಾಗಳ ವಾಣಿ : ದಿನಾಂಕ 24.08.2015 ರ ತಾಜಾ ಸುದ್ದಿಗಳು













ಮಾಗಳ ವಾಣಿ: ಮಾಗಳದಲ್ಲಿ ಹೊಳೆಗೆ ಎಡೆಕೊಡುವ ಹಬ್ಬ



ಮಾಗಳ ಗ್ರಾಮದಲ್ಲಿಂದು ಹೊಳೆಗಂಗಮ್ಮನಿಗೆ ಎಡೆ ನೀಡುವ ಹಬ್ಬ. ಪಂಚಮಿಯ ಹಾಲು ಹಾಕುವ ದಿನದ ಮರುದಿನವೇ ಹೋಳಿಗೆ ಹಬ್ಬ. ಅಂದೇ ಮಾಗಳ ಗ್ರಾಮದ ವರಪ್ರಸಾದ ಎನಿಸಿರುವ ಮಹಾ ತಾಯಿ ಮಾತೃ ಸ್ವರೂಪಿಣಿ “ತುಂಗ ಭದ್ರೆ”(ಜೀವ ನದಿ)ಗೆ ಎಡೆಕೊಡುವ ಹಬ್ಬ. ನಮ್ಮ ಊರಿನ ಹೆಣ್ಣು ಮಕ್ಕಳಿಗೆ ಈ ಹಬ್ಬ ಒಂದು ವಿಶೇಷವೇ ಸರಿ. ಆಷಾಡ ಮಾಸ ಕಳೆದು ಶ್ರಾವಣ ಮಾಸ ಆರಂಭವಾಗಿ ಕೆಲವೇ ಕೆಲ ದಿನಗಳು ಉರುಳಿರುತ್ತವೆ. ಹೊಸ ಹೊಸ ಬಟ್ಟೆ, ಸೀರೆಗಳನ್ನು ತೊಟ್ಟು ಮನೆಯಲ್ಲಿ ಅಕ್ಕ-ತಂಗಿ, ತಾಯಿ, ಸ್ನೇಹಿತಯರೊಡಗೂಡಿ ಹೋಳಿಗೆ, ಅನ್ನ, ರುಚಿಯಾದ ಮಸಾಲೆ ಸಾರು, ಪೂಜೆಗೆ ಬೇಕಾದ ಸಾಮಗ್ರಿಗಳು, ತಾಯಿಗೆ ನೀಡಲು ನೈವೇದ್ಯ(ಎಡೆ), ತೆಂಗಿನ ಕಾಯಿ, ಕರ್ಪೂರಗಳನ್ನು ಒಂದು ಚೀಲದಲ್ಲಿ ಹಾಕಿಕೊಂಡು ಓಣಿಯಲ್ಲಿನ ವಾರಿಗಿತ್ತಿ(ಗೆಳೆತಿಯರು)ಯರೊಡನೆ ಹೊಸ ವಸ್ತ್ರ ಧರಿಸಿ, ಬಣ್ಣದ ಬಳೆ ಧರಿಸಿ, ಹೂವು ಮುಡಿದು ಶ್ರಾವಣ ಮಾಸದ  ಶುಭ ದಿನಲ್ಲಿ ಹೊರಟು, ಬಯಲು ಬಸವೇಶ್ವರ ದೇವಸ್ಥಾನದ ದರ್ಶನ ಪಡೆದು, ಸ್ಟಿಮರ್ ಹೊಳೆಗೋ, ಮಲ್ಲದಾಸರ ಹೊಳೆಗೋ ಹೋಗಿ, ಮೈದುಂಬಿ ಹರಿಯುತ್ತಿರುವ ತಾಯಿ ತಂಗೆಯಲ್ಲಿ ಒಂದು ಕ್ಷಣ ಮಿಂದೆದ್ದು ಎರಡು ಹನಿ ನೀರನ್ನು ಮೈಗೆ ಸಿಂಪಡಿಸಿಕೊಂಡು ಪವಿತ್ರವಾದ ನದಿಗೆ ನಾನಾ ತರಹದ ಹೂವು, ಪತ್ರಿಗಳಿಂದ ಪೂಜೆ ಗೈದು, ಮನೆಯಿಂದ ತಂದಿದ್ದ ತೊಂಗಿನಕಾಯಿಗೆ ಒಂದು ಕುಬುಸ ಅಥವಾ ಸೀರೆಯನ್ನು ಸುತ್ತಿ ದಾರದಿಂದ ಮಾಡಿದ 5 ಎಳೆ ಸರವನ್ನು ಹಾಕಿ ಕರ್ಪೂರ ಬೆಳೆಗೆ ಮನೆಯಿಂದ ತಂದಿದ್ದ ನೈವೇಧ್ಯವನ್ನು ತಾಯಿ ತುಂಗೆಗೆ ಸಮರ್ಪಿಸಿ, ನಮ್ಮ ಗ್ರಾಮಕ್ಕೆ, ಹೊಲಗಳಿಗೆ ನೀರು ಸಾಕಾಗುವಷ್ಟಾಗಲಿ, ತಾಯಿ ತುಂಗೆ ಈ ವರ್ಷಪೂರ್ತಿ ಮೈದುಂಬಿ ಹರಿಯಂದು ಕೇಳಿಕೊಳ್ಳುತ್ತಾ ಗೆಳೆತಿಯರೊಂದಿಗೆ ನೀರಿನಲ್ಲಿ ಆಟವಾಡುತ್ತಾ ತಂದಿದ್ದ ಬುತ್ತಿಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಸವಿಯಾದ ಹೋಳಿಗೆ, ತುಪ್ಪ,ಅನ್ನ, ಮಸಾಲೆ ಸಾಂಬಾರ್ ಅನ್ನು ಹೊಟ್ಟೆ ತುಂಬಾ ಸವಿದು ಬರುವಾಗ ನದಿಯಿಂದ ತುಂಬಿಕೊಂಡು ಬಂದ ಅರ್ಧ ನೀರನ್ನು ಬಯಲು ಬಸವೇಶ್ವರನಿಗೆ, ಇನ್ನರ್ಧ ನೀರನ್ನು ಗ್ರಾಮದ ಅಗಸಿಯಲ್ಲಿರುವ ಹೊನ್ನತ್ತೆಮಮ್ಮ ದೇಗುಲದ ಮೂರ್ತಿಗೆ ಅರ್ಪಿಸಿ ಮನೆಗೆ ತೆರಳುವರು.

               
 ಹೊಸದಾಗಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದ ನವ ವಧುಗಳಿಗದು ಸ್ವರ್ಗದ ಹಬ್ಬ. ಯಾಕೆಂದರೆ 18-20-25 ವರ್ಷಗಳಿಂದ ಹುಟ್ಟಿ ಬೆಳೆದ ಊರನ್ನು ಬಿಟ್ಟು ಗಂಡನೆಮನೆಯ ಹೊಸ ಪರಿಸರ, ಹೊಸ ಜನರಿಗೆ ಹೊಂದಿಕೊಳ್ಳುವುದೇ ದುಸ್ತರವಾಗಿರುತ್ತದೆ. ಅಂದಮೇಲೆ ವರ್ಷದ ಮೊದಲನೇ ಹಬ್ಬವನ್ನು ಆಚರಿಸಲು ತವರು ಮನೆಗೆ ಬಂದ ಹೆಣ್ಣು ಮಕ್ಕಳು ತಮ್ಮ ಸ್ನೇಹಿತೆಯರೊಡನೆ ತಮ್ಮ ಕಷ್ಟ-ಸುಖ ಹಂಚಿಕೊಳ್ಳಲು ಇದು ಸರಿಯಾದ ವೇದಿಕೆಯೇ ಸರಿ.

                ಗಂಡು ಮಕ್ಕಳಿಗೂ ಕೂಡಾ ಈ ಹಬ್ಬ ಒಂದು ಮೋಜೇ ಸರಿ. ಯಾಕೆಂದರೆ ಅವರೂ ಕೂಡಾ ಹೊಸ ಬಟ್ಟೆ ಧರಿಸಿ ಗೆಳೆಯರೊಡನೆ ಸೇರಿ ವಿವಿಧ ಮನೋರಂಜನಾ ಆಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಅಲ್ಲದೇ ತಮ್ಮ ತಮ್ಮ ಸ್ನೇಹಿತರೊಡಗೂಡಿ ಗ್ರಾಮದ ನದಿಗೆ ಓಗಿ ನಮಸ್ಕರಿಸಿ, ಅಕ್ಕ- ತಂಗಿಯರೊಡಗೂಡಿ ಊಟವನ್ನು ಸವಿಯುವರು

                ಇಂತಹ ಹತ್ತು ಹಲವು ವಿಶೇಷತೆ ಹೊಂದಿರುವ ಪಂಚಮಿ ಹಬ್ಬ, ಹೊಳೆಗೆ ಎಡೆ ಕೊಡುವ ಈ ಹಬ್ಬವನ್ನು ನೆನೆಸಿಕೊಂಡರೆ ಯಾವ ಕೋಟಿಕೊಟ್ಟರೂ ಈ ಸಂಭ್ರಮ ಮರಳಿ ಬರುವುದಿಲ್ಲವಲ್ಲವೇ ಸ್ನೇಹಿತರೇ. ನಿಜವಾಗಿಯೂ ಇಂತಹ ಹಬ್ಬ,  ತಂದೆ ತಾಯಿ, ಅಕ್ಕ, ತಂಗಿ, ಸ್ನೇಹಿತರು, ಮನೋರಂಜನೆ, ಸಂಬ್ರವನ್ನು ಕಳೆದುಕೊಂಡು ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. 

ಮರೆಯದಿರಿ ಸ್ನೇಹಿತರೇ ಬನ್ನಿ ಇಂತಹ ಹಬ್ಬ ಹರಿದಿನಗಳಿಗೆ ನಾವು ಸಾಕ್ಷಿಯಾಗೋಣ.ಅತೀಯಾದ ಬ್ಯುಸಿ ಶೆಡ್ಯುಲ್ ನಲ್ಲೂ ನಾವು ನಮ್ಮ ತನವನ್ನು ಮೆರೆಯೋಣ, ಕಳೆದು ಹೋದ ಸುಖಗಳ ಅನುಭವಿಸೋಣ, ಎಲ್ಲರೊಂದಾಗಿ ಹಾಡೋಣ, ನಲಿಯೋಣ, ನಮ್ಮ ಗ್ರಾಮದ ಪರಂಪರೆಯ ಉಳಿಸಿ ಬೆಳೆಸೋಣ

ಮಾಗಳದ ಮಾಜಿ ಸೈನಿಕ ಇದೀದ ಯಶಸ್ವಿ ಕೃಷಿಕ : ಶ್ರೀ ಶೇಖನ ಗೌಡ್ರು ಪಾಟೀಲ್

ಬೆಳೆ ವೈಫಲ್ಯ ಹಾಗೂ ಸಾಲ ಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂತಹ ಸಂದರ್ಭ ದಲ್ಲಿ ಇಲ್ಲಿನ ಮಾಜಿ ಸೈನಿಕರೊಬ್ಬರು ಕೃಷಿಯಲ್ಲೇ ಶಿಸ್ತಿನ ಬದುಕು ಕಟ್ಟಿಕೊಂಡು ಯಶಸ್ವಿಯಾಗಿದ್ದಾರೆ.

ಹೂವಿನಹಡಗಲಿ ತಾಲ್ಲೂಕು ಮಾಗಳ ಗ್ರಾಮದ  ಮಾಜಿ ಸೈನಿಕ ಶೇಖರಗೌಡ ಪಾಟೀಲ್ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಸಮೃದ್ಧ ಫಸಲು ತೆಗೆಯುತ್ತಿದ್ದಾರೆಸೇನೆಯಲ್ಲಿ ಇರುವಷ್ಟು ದಿನ ಬಂದೂಕು ಹಿಡಿದು ಶಿಸ್ತಿನ ಜೀವನ ನಡೆಸಿದ್ದ ಪಾಟೀಲರು ನಿವೃತ್ತಿಯ ಬಳಿಕ ನೇಗಿಲು ಹಿಡಿದೂ ಯಶಸ್ಸು ಕಂಡಿದ್ದಾರೆ. 1982 ರಿಂದ 1999ರವರೆಗೆ ಭಾರ ತೀಯ ಸೇನೆಯಲ್ಲಿದ್ದ ಅವರು ಜಮ್ಮು-ಕಾಶ್ಮೀರ, ಪಂಜಾಬ್, ಅಸ್ಸಾಂ, ಪಶ್ಚಿಮ ಬಂಗಾಳ, ಗುಜರಾತ್, ದೆಹಲಿಯಲ್ಲಿ ಸಿಪಾಯಿ, ಲ್ಯಾನ್ಸ್ನಾಯಕ್, ನಾಯಕ್ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.

ಸೇನೆಯಿಂದ ನಿವೃ ತ್ತಿಯಾದ ಬಳಿಕ ಕೈತುಂಬಾ ಸಂಬಳ ಸಿಗುವ ಉದ್ಯೋಗ ಅವಕಾಶಗಳು ಇವರನ್ನು ಹುಡುಕಿ ಬಂದಿದ್ದವು. ‘ದೇಶ ಸೇವೆ ಮಾಡಿರುವ ತಾವು ಸರ್ಕಾರಿ ನೌಕರಿ ಸೇರಿ ಯಾರಿಗೂ ಸೆಲ್ಯೂಟ್ ಹೊಡೆಯುವುದು ಬೇಡಎಂದು ಅವರ ಪತ್ನಿ ಲಲಿತಾ ಪಾಟೀಲ್ ಹಟ ಹಿಡಿದಿದ್ದರಿಂದ ಕೃಷಿಯತ್ತ ಒಲವು ಬೆಳೆಸಿಕೊಂಡರು.

ನಿವೃತ್ತಿಯ ನಂತರ ಬಂದ ಹಿಡಿಗಂಟಿನಲ್ಲಿ ತಮ್ಮ ಸ್ವಗ್ರಾಮ ಮಾಗಳ ದಲ್ಲಿ 6 ಎಕರೆ ಮಳೆಯಾಶ್ರಿತ ಜಮೀನು ಖರೀದಿಸಿ, ಎರಡು ಕೊಳವೆ ಬಾವಿ ಕೊರೆಯಿಸಿ ನೀರಾವರಿ ಮಾಡಿ ಕೊಂಡಿ ದ್ದಾರೆ. ನಾಲ್ಕುವರೆ ಎಕರೆಯಲ್ಲಿ ತೋಟ ಗಾರಿಕೆ ಬೆಳೆಗಳಾದ ಮಾವುಸಪೋಟ, ಲಿಂಬೆ ಮತ್ತು ಕರಿಬೇವು ಬೆಳೆದು ಪ್ರತಿವರ್ಷವೂ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಮಲ್ಲಿಕಾ, ಬೆನಿಷಾ, ಸಿಂಧೂರ, ರಸಪೂರಿ ತಳಿಯ ಮಾವು ಮತ್ತು ಕ್ರಿಕೆಟ್ ಬಾಲ್, ಖಾಲಿಪತ್ತಾ ತಳಿಯ ಸಪೋಟ ಗಿಡಗಳನ್ನು  ಸಾವಯವ ಪದ್ಧತಿಯಲ್ಲಿ ಬೆಳೆಸಿರುವುದ ರಿಂದ ಇಲ್ಲಿ ಸಿಗುವ ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ.

ಸಾವಯವ ಕೃಷಿ ಪದ್ದತಿಯಲ್ಲಿ ಹಣ್ಣಿನ ಗಿಡ ಬೆಳೆಸುವ ಜತೆಗೆ ತೋಟದ ಬದುವಿನ ಸುತ್ತಲೂ ತೇಗ, ಸಿಲ್ವರ್, ತೆಂಗಿನ ಗಿಡಗಳನ್ನು ಬೆಳೆಸಿ ಆದಾಯ ಮೂಲವನ್ನು ಇಮ್ಮಡಿ ಗೊಳಿಸಿಕೊಳ್ಳುವ ಮೂಲಕ ಕೃಷಿಯನ್ನು ಪ್ರಯೋಗಶಾಲೆ ಯಾಗಿ ಮಾಡಿ ಕೊಂಡಿದ್ದಾರೆಬಂಜರು ಭೂಮಿಯನ್ನು ಸಮತಟ್ಟು ಮಾಡಿ ತಂಬಾಕು, ಸೆಣಬು ಬೆಳೆದು ಹಸಿರೆಲೆ ಗೊಬ್ಬರವನ್ನು ಭೂಮಿಗೆ ಹರಡಿ ದ್ದಾರೆ. ನಂತರ ಕೆರೆಯ ಹೂಳನ್ನು ಏರಿಸಿ ಭೂಮಿಯ ಫಲವತ್ತತೆ ಹೆಚ್ಚಿಸಿ ಕೊಂಡೇ ಕೃಷಿಯನ್ನು ಆರಂಭಿಸಿದ್ದರಿಂದ ಅಂದು ಗೇಲಿ ಮಾಡಿದ ಜನರೇ ಇಂದು ಕಣ್ಣರಳಿಸಿ ನೋಡುವಂತಹ ಸಮೃದ್ಧ ಫಸಲು ತೆಗೆಯುತ್ತಿದ್ದಾರೆ.

ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಇದೆಸರ್ಕಾರ ಸಾವ ಯವ ಕೃಷಿಗೆ ಉತ್ತೇಜನ ನೀಡಿದಂತೆ ಮಾರುಕಟ್ಟೆ ವ್ಯವಸ್ಥೆಗೂ ಆದ್ಯತೆ ನೀಡಬೇಕುಎಂದು ಶೇಖರಗೌಡ ಪಾಟೀಲ್ ಒತ್ತಾಯಿಸುತ್ತಾರೆ.   ಕೆ. ಸೋಮಶೇಖರ್

ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಹಿತೋಪದೇಶದಿಂದ ಪ್ರಭಾವಿತನಾಗಿ ಜೀವನದಲ್ಲಿ ಸಾಧಿಸುವ ಛಲ ಬೆಳೆಸಿಕೊಂಡೆ. ಸರ್ಕಾರಿ ನೌಕರಿಗಿಂತ ಕೃಷಿ ನೆಮ್ಮದಿ ಕೊಟ್ಟಿದೆ
  –ಶೇಖರಗೌಡ ಪಾಟೀಲಮಾಜಿ ಯೋಧ