ಬೆಳೆ ವೈಫಲ್ಯ ಹಾಗೂ ಸಾಲ
ಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇಂತಹ ಸಂದರ್ಭ ದಲ್ಲಿ ಇಲ್ಲಿನ
ಮಾಜಿ ಸೈನಿಕರೊಬ್ಬರು ಕೃಷಿಯಲ್ಲೇ ಶಿಸ್ತಿನ ಬದುಕು ಕಟ್ಟಿಕೊಂಡು
ಯಶಸ್ವಿಯಾಗಿದ್ದಾರೆ.
ಹೂವಿನಹಡಗಲಿ ತಾಲ್ಲೂಕು ಮಾಗಳ ಗ್ರಾಮದ ಮಾಜಿ
ಸೈನಿಕ ಶೇಖರಗೌಡ ಪಾಟೀಲ್ ನೈಸರ್ಗಿಕ
ಕೃಷಿ ಪದ್ಧತಿ ಅಳವಡಿಸಿಕೊಂಡು ಸಮೃದ್ಧ
ಫಸಲು ತೆಗೆಯುತ್ತಿದ್ದಾರೆ. ಸೇನೆಯಲ್ಲಿ ಇರುವಷ್ಟು ದಿನ ಬಂದೂಕು ಹಿಡಿದು
ಶಿಸ್ತಿನ ಜೀವನ ನಡೆಸಿದ್ದ ಪಾಟೀಲರು
ನಿವೃತ್ತಿಯ ಬಳಿಕ ನೇಗಿಲು ಹಿಡಿದೂ
ಯಶಸ್ಸು ಕಂಡಿದ್ದಾರೆ. 1982 ರಿಂದ 1999ರವರೆಗೆ ಭಾರ ತೀಯ
ಸೇನೆಯಲ್ಲಿದ್ದ ಅವರು ಜಮ್ಮು-ಕಾಶ್ಮೀರ,
ಪಂಜಾಬ್, ಅಸ್ಸಾಂ, ಪಶ್ಚಿಮ ಬಂಗಾಳ,
ಗುಜರಾತ್, ದೆಹಲಿಯಲ್ಲಿ ಸಿಪಾಯಿ, ಲ್ಯಾನ್ಸ್ ನಾಯಕ್,
ನಾಯಕ್ ಹುದ್ದೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ.
ಸೇನೆಯಿಂದ ನಿವೃ ತ್ತಿಯಾದ ಬಳಿಕ
ಕೈತುಂಬಾ ಸಂಬಳ ಸಿಗುವ ಉದ್ಯೋಗ
ಅವಕಾಶಗಳು ಇವರನ್ನು ಹುಡುಕಿ ಬಂದಿದ್ದವು.
‘ದೇಶ ಸೇವೆ ಮಾಡಿರುವ ತಾವು
ಸರ್ಕಾರಿ ನೌಕರಿ ಸೇರಿ ಯಾರಿಗೂ
ಸೆಲ್ಯೂಟ್ ಹೊಡೆಯುವುದು ಬೇಡ’ ಎಂದು ಅವರ
ಪತ್ನಿ ಲಲಿತಾ ಪಾಟೀಲ್ ಹಟ
ಹಿಡಿದಿದ್ದರಿಂದ ಕೃಷಿಯತ್ತ ಒಲವು ಬೆಳೆಸಿಕೊಂಡರು.
ನಿವೃತ್ತಿಯ ನಂತರ ಬಂದ ಹಿಡಿಗಂಟಿನಲ್ಲಿ
ತಮ್ಮ ಸ್ವಗ್ರಾಮ ಮಾಗಳ ದಲ್ಲಿ 6 ಎಕರೆ
ಮಳೆಯಾಶ್ರಿತ ಜಮೀನು ಖರೀದಿಸಿ, ಎರಡು
ಕೊಳವೆ ಬಾವಿ ಕೊರೆಯಿಸಿ ನೀರಾವರಿ
ಮಾಡಿ ಕೊಂಡಿ ದ್ದಾರೆ. ನಾಲ್ಕುವರೆ
ಎಕರೆಯಲ್ಲಿ ತೋಟ ಗಾರಿಕೆ ಬೆಳೆಗಳಾದ
ಮಾವು, ಸಪೋಟ, ಲಿಂಬೆ ಮತ್ತು
ಕರಿಬೇವು ಬೆಳೆದು ಪ್ರತಿವರ್ಷವೂ ಲಕ್ಷ
ಲಕ್ಷ ಆದಾಯ ಗಳಿಸುತ್ತಿದ್ದಾರೆ. ಮಲ್ಲಿಕಾ,
ಬೆನಿಷಾ, ಸಿಂಧೂರ, ರಸಪೂರಿ ತಳಿಯ
ಮಾವು ಮತ್ತು ಕ್ರಿಕೆಟ್ ಬಾಲ್,
ಖಾಲಿಪತ್ತಾ ತಳಿಯ ಸಪೋಟ ಗಿಡಗಳನ್ನು
ಸಾವಯವ ಪದ್ಧತಿಯಲ್ಲಿ ಬೆಳೆಸಿರುವುದ ರಿಂದ ಇಲ್ಲಿ ಸಿಗುವ
ಹಣ್ಣುಗಳಿಗೆ ಹೆಚ್ಚು ಬೇಡಿಕೆ ಇದೆ.
ಸಾವಯವ ಕೃಷಿ ಪದ್ದತಿಯಲ್ಲಿ ಹಣ್ಣಿನ
ಗಿಡ ಬೆಳೆಸುವ ಜತೆಗೆ ತೋಟದ
ಬದುವಿನ ಸುತ್ತಲೂ ತೇಗ, ಸಿಲ್ವರ್,
ತೆಂಗಿನ ಗಿಡಗಳನ್ನು ಬೆಳೆಸಿ ಆದಾಯ ಮೂಲವನ್ನು
ಇಮ್ಮಡಿ ಗೊಳಿಸಿಕೊಳ್ಳುವ ಮೂಲಕ ಕೃಷಿಯನ್ನು ಪ್ರಯೋಗಶಾಲೆ
ಯಾಗಿ ಮಾಡಿ ಕೊಂಡಿದ್ದಾರೆ. ಬಂಜರು
ಭೂಮಿಯನ್ನು ಸಮತಟ್ಟು ಮಾಡಿ ತಂಬಾಕು,
ಸೆಣಬು ಬೆಳೆದು ಹಸಿರೆಲೆ ಗೊಬ್ಬರವನ್ನು
ಭೂಮಿಗೆ ಹರಡಿ ದ್ದಾರೆ. ನಂತರ
ಕೆರೆಯ ಹೂಳನ್ನು ಏರಿಸಿ ಭೂಮಿಯ
ಫಲವತ್ತತೆ ಹೆಚ್ಚಿಸಿ ಕೊಂಡೇ ಕೃಷಿಯನ್ನು ಆರಂಭಿಸಿದ್ದರಿಂದ
ಅಂದು ಗೇಲಿ ಮಾಡಿದ ಜನರೇ
ಇಂದು ಕಣ್ಣರಳಿಸಿ ನೋಡುವಂತಹ ಸಮೃದ್ಧ ಫಸಲು ತೆಗೆಯುತ್ತಿದ್ದಾರೆ.
‘ಸಾವಯವ ಕೃಷಿ ಉತ್ಪನ್ನಗಳಿಗೆ ಹೆಚ್ಚಿನ
ಬೇಡಿಕೆ ಇದೆ. ಸರ್ಕಾರ ಸಾವ ಯವ
ಕೃಷಿಗೆ ಉತ್ತೇಜನ ನೀಡಿದಂತೆ ಮಾರುಕಟ್ಟೆ
ವ್ಯವಸ್ಥೆಗೂ ಆದ್ಯತೆ ನೀಡಬೇಕು’ ಎಂದು
ಶೇಖರಗೌಡ ಪಾಟೀಲ್ ಒತ್ತಾಯಿಸುತ್ತಾರೆ. ಕೆ. ಸೋಮಶೇಖರ್
ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರಿಗಳ ಹಿತೋಪದೇಶದಿಂದ ಪ್ರಭಾವಿತನಾಗಿ ಜೀವನದಲ್ಲಿ ಸಾಧಿಸುವ ಛಲ ಬೆಳೆಸಿಕೊಂಡೆ.
ಸರ್ಕಾರಿ ನೌಕರಿಗಿಂತ ಕೃಷಿ ನೆಮ್ಮದಿ ಕೊಟ್ಟಿದೆ.
–ಶೇಖರಗೌಡ ಪಾಟೀಲ, ಮಾಜಿ ಯೋಧ
No comments:
Post a Comment